



ನವದೆಹಲಿ: ಬೆಲೆ ಏರಿಕೆ ಓಟ ಇಂದು (ಮಾರ್ಚ್ 27) ಮತ್ತೆ ಮುಂದುವರಿದಿದೆ. ಇಂದು ಮತ್ತೆ ಪೆಟ್ರೋಲ್ ಬೆಲೆ ಲೀಟರ್ ಗೆ 50 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 55 ಪೈಸೆ ಏರಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಲೀಟರ್ ಇಂದು ಪೆಟ್ರೋಲ್ 50 ಪೈಸೆ ಏರಿಕೆ, ಲೀಟರ್ ಡೀಸೆಲ್ 55 ಪೈಸೆ ಏರಿಕೆ ಆಗಿದೆ. ಅದರಂತೆ, ಲೀಟರ್ ಪೆಟ್ರೋಲ್ ದರ 104.44 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 88.67 ರೂಪಾಯಿ ದಾಖಲಾಗಿದೆ. ಮೈಸೂರಿನಲ್ಲಿ ಪೆಟ್ರೋಲ್ ದರ 103.98 ರೂಪಾಯಿ, ಡೀಸೆಲ್ ದರ 88.24 ರೂಪಾಯಿ ಆಗಿದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 105.00 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.10 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 108.53 ಮತ್ತು 93.57 ರೂಪಾಯಿ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.