


ಕಾರ್ಕಳ: ಬುಡಕಟ್ಟು ಜನಾಂಗದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ರಚಿಸಿರುವ ಆದಿವಾಸಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಜನರನ್ನು ನೇಮಕ ಮಾಡಬೇಕು. ಸರ್ಕಾರದಲ್ಲಿರುವ ವಿವಿಧ ನಿಗಮಗಳ ನೀತಿ, ಮಾನದಂಡಗಳನ್ನು ಆದಿವಾಸಿ ಅಭಿವೃದ್ಧಿ ನಿಗಮದಲ್ಲಿ ಆಳವಡಿಸಿಕೊಳ್ಳಬಾರದು. ಜನಾಂಗದ ಎಲ್ಲರಿಗೂ ಅನುಕೂಲ ಆಗುವಂತೆ ನೂತನ ನೀತಿ, ಮಾನದಂಡಗಳನ್ನು ಜಾರಿಗೆ ತರಬೇಕು. ಅರಣ್ಯ ಹಕ್ಕುಪತ್ರ ರೈತರ ಆರ್ಥಿಕ ಕಲ್ಯಾಣಕ್ಕಾಗಿ ವಿಶೇಷ ಪ್ಯಾಕೇಜ್ ಮೀಸಲಿಡಬೇಕು. ಆದಿವಾಸಿ ಜನಾಂಗದ ಆರೋಗ್ಯ ಹಿತಾಸಕ್ತಿಗೋಸ್ಕರ ವೈದ್ಯಕೀಯ ವೆಚ್ಚವನ್ನು ಭರಿಸಬೇಕು. ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ, ಭೂಮಿ ಖರೀದಿ, ಸ್ವಯಂ ಉದ್ಯೋಗ ಮತ್ತು ಇತರ ಉದ್ಯಮಗಳನ್ನು ಉತ್ತೇಜಿಸುವ ಗುರಿ, ಸಾಲ ಮತ್ತು ಸಹಾಯಧನವನ್ನು ಹೆಚ್ಚಿಸಬೇಕು. ಆಯಾಯ ಆರ್ಥಿಕ ವರ್ಷದಲ್ಲಿ ನಿಗಮಕ್ಕೆ ರೂ.200 ಕೋಟಿ ಮೀಸಲಿಡಬೇಕು ಎಂದು ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.