



ಕಾರ್ಕಳ: ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷರಾಗಿ ಗಂಗಾಧರ ಗೌಡ ಈದು ಆಯ್ಕೆಯಾಗಿದ್ದಾರೆ. ಕಾರ್ಕಳ ತಾಲೂಕಿನ ಮಾಳದ ಪೆರಡ್ಕ ಬಳಿ ಯ ಮಲೆಕುಡಿಯ ಸಮುದಾಯ ಭವನದಲ್ಲಿ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ ಎತ್ತಲ್ ಗುಡ್ಡೆ ನೇತೃತ್ವದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿಶ್ರೀಮತಿ ಗೀತಾ ಗೌಡ ಕಬ್ಬಿನಾಲೆ, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಕೆರ್ವಾಶೆ, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಶೋಭಾ, ಖಜಾಂಚಿಯಾಗಿ ಶ್ರೀಮತಿ ಸುಂದರಿ ಪೇರಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಸುಂದರ ಗೌಡ ರೆಂಜಾಳ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಶೇಖರ ಗೌಡ ನಾಡ್ಪಾಲು, ವಕ್ತಾರರಾಗಿ ದಿನೇಶ್ ಗೌಡ ನೂರಾಳ್ ಬೆಟ್ಟು, ಸಹ ವಕ್ತಾರರಾಗಿ ಮನೋಜ್ ಇವರು ಸಭೆಯಲ್ಲಿದ್ದ ಸರ್ವ ಸದಸ್ಯರ ಸರ್ವಾನುಮತದಿಂದ ಆಯ್ಕೆಯಾದರು. ಹಾಗೂ ಸಮುದಾಯದ ಸರ್ಕಾರಿ ಸಮಿತಿ ಸದಸ್ಯರುಗಳು, ವಿವಿಧ ಸ್ಥರದ ಜನಪ್ರತಿನಿಧಿಗಳು, ಸಹಕಾರಿ ಸಂಘದ ನಿರ್ದೇಶಕರುಗಳು ಇವರನ್ನು ಖಾಯಂ ಸದಸ್ಯರನ್ನಾಗಿ ಆರಿಸಲಾಯಿತು. ಸಂಘ ಮತ್ತು ಸಮುದಾಯ ಭವನದ ಸಲಹಾ ಸಮಿತಿಯನ್ನು ರಚಿಸಲಾಯಿತು. ಸಲಹಾ ಸಮಿತಿ ಸದಸ್ಯರಾಗಿ. ಶ್ರೀಧರ್ ಗೌಡ ಈದು. ಸುಧಾಕರ ಗೌಡ ನಾಡ್ಪಾಲು. ಗೋಪಾಲ್ ಗೌಡ ಎತ್ತಲ್ ಗುಡ್ಡೆ, ಸಾಧು ಗೌಡ ನಾರ್ಜೆ, ಪ್ರಕಾಶ್ ಗೌಡ ಅಂಡಾರು, ಭಾಸ್ಕರ್ ಗೌಡ ಕೆರ್ವಾಶೆ, ಪ್ರಶಾಂತ್ ಹೆರ್ಮುಂಡೆ, ನೋಣಯ್ಯ ಗೌಡ ರೆಂಜಾಳ, ಸತೀಶ್ ಪಾರಿಕಲ್ಲು, ವಿಷ್ಣುಮೂರ್ತಿ ಕೆರ್ವಾಶೆ, ವೀರಪ್ಪ ಗೌಡ ಪೇರಡ್ಕ, ಮೋಹನ್ ಗೌಡ, ಗೋಪಾಲ್ ಗೌಡ ಕಬ್ಬಿನಾಲೆ, ವಸಂತ ಗೌಡ ಮುದ್ರಾಡಿ, ಉದಯ ಗೌಡ, ನಾರಾಯಣ ಗೌಡ ಮುಟ್ಲುಪಾಡಿ. ಶ್ರೀಮತಿ ವೀಣಾ ಶಿರ್ಲಾಲು, ಜ್ಯೋತಿ ಶಿರ್ಲಾಲು, ಶೀನಪ್ಪ ನಲ್ಲೂರು, ಪ್ರವೀಣ್ ನಲ್ಲೂರು. ಡೀಕಯ್ಯ ಗೌಡ ನೂರಾಳ್ ಬೆಟ್ಟು, ಆನಂದ ಗೌಡ ನೂರಾಳ್ ಬೆಟ್ಟು, ಸಂತೋಷ್ ಗೌಡ ಈದು, ಶ್ರೀಮತಿ ಪುಷ್ಪಾ ರೆಂಜಾಳ. ಮಹಾಬಲ ಗೌಡ ಈದು ಆಯ್ಕೆಯಾದರು. ಸಂಘದ ಅಜೀವ ಸದಸ್ಯತ್ವವನ್ನು ಎರಡು ಸಾವಿರ ರೂಪಾಯಿ ನಿಗದಿ ಮಾಡಲಾಯಿತು. ಆಡಳಿತ ಮಂಡಳಿಯ ಅವಧಿ ಮೂರು ವರ್ಷ ಎಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳು, ಜಿಲ್ಲಾ ಸಂಘದ ಪದಾಧಿಕಾರಿಗಳು, ನಾನಾ ತಾಲೂಕು ಸಮಿತಿಯ ಪದಾಧಿಕಾರಿಗಳು, ವಿವಿಧ ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕುಮಾರಿ ಯುಕ್ತಿ ಮಾಳೆ ಪ್ರಾರ್ಥಿಸಿ, ಸಾಧು ಗೌಡ ಸ್ವಾಗತಿಸಿ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಈದು ಪ್ರಸ್ತಾವನೆಗೈದು, ಅಶೋಕ್ ಕೆರ್ವಾಶೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.