logo
WhatsApp Image 2026-04-02 at 14.46.04.jpeg
hindalco everlast.jpeg

ಗಂಗೊಳ್ಳಿಯ ಯುವಕ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತ್ಯು..!

ಟ್ರೆಂಡಿಂಗ್
share whatsappshare facebookshare telegram
26 Sept 2024
post image

ಕುಂದಾಪುರ: ಸೌದಿ ಅರೇಬಿಯಾದಲ್ಲಿ ಗಂಗೊಳ್ಳಿ ಮೂಲದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ. 25 ರಂದು ಬುಧವಾರ ಸಂಜೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಗಂಗೊಳ್ಳಿ ಜಾಮಿಯಾ ಮೊಹಲ್ಲಾ ಪೊಲೀಸ್ ಚೆಕ್ ಪೋಸ್ಟ್ ಎದುರಿನ ನಿವಾಸಿ ಬಷೀರ್ ಅಹ್ಮದ್ ಎಂಬವರ ಪುತ್ರ ಮುಬಾಶೀರ್ ಬಷೀರ್ (30) ಎಂದು ತಿಳಿದು ಬಂದಿದೆ.

ಇವರು ಇಂದು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸೌದಿಯಲ್ಲಿ ಇರುವ ಸ್ಥಳೀಯ ಅನಿವಾಸಿ ಭಾರತೀಯರು ಹಾಗೂ ಗಂಗೊಳ್ಳಿಯಲ್ಲಿ ಇರುವ ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ.

ಎರಡು ವರುಷಗಳ ಹಿಂದೆ ಮಹಾರಾಷ್ಟ್ರದ ಪೂನಾ ಮೂಲದ ಯುವತಿಯನ್ನು ವಿವಾಹವಾಗಿದ್ದ ಈತ, ಪತ್ನಿಯ ಜೊತೆಯಲ್ಲಿಯೇ ಸೌದಿಯಲ್ಲಿ ಉದ್ಯೋಗದಲ್ಲಿದ್ದ. ಪ್ರಾಥಮಿಕ ಶಿಕ್ಷಣವನ್ನು ಕುಂದಾಪುರ ಹೆಚ್ ಎಂ ಎಂ ಶಾಲೆ, ಪ್ರೌಡ ಶಿಕ್ಷಣವನ್ನು ವಿ ಕೆ ಆರ್ ಆಂಗ್ಲ ಮಾಧ್ಯಮ ಶಾಲೆ, ಪಿ ಯು ಶಿಕ್ಷಣವನ್ನು ಭಂಡರ್ಕಾರ್ಸ್ ಕಾಲೇಜು, ತದನಂತರ ಇಂಜಿನಿಯರಿಂಗ್ ಪದವಿಯನ್ನು ಭಟ್ಕಳದ ಅಂಜುಮನ್ ಕಾಲೇಜು ಹಾಗೂ ಚೆನ್ನೈ ಯ ಕಾಲೇಜಿನಲ್ಲಿ ಮಾಡಿದ್ದರು.

ಸಮಾಜದ ತುರ್ತು ಅಗತ್ಯಗಳಿಗೆ ಸ್ಪಂದಿಸುತ್ತಿದ್ದ ಇವರು, ಬಡವರಿಗೆ ಆರ್ಥಿಕ ನೆರವು ಕೂಡ ನೀಡುತ್ತಿದ್ದರು. ಕೆಲ ಸಮಯದ ಹಿಂದೆ ಉದ್ಯೋಗಕ್ಕಾಗಿ ಇವರು ಸೌದಿಗೆ ತೆರಳಿದ್ದರು. ಇವರು ಪತ್ನಿ, ತಾಯಿ, ತಂದೆ, ಹಾಗೂ ಓರ್ವ ಸಹೋದರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ವಿಧಿವಿಧಾನಗಳ ಬಗ್ಗೆ ಸೌದಿ ದೇಶದ ಕಾನೂನೂ ಕ್ರಮಗಳ ನಂತರವೇ ತಿಳಿದು ಬರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.