



ಉಡುಪಿ: ರಾಜ್ ಬಿ ಶೆಟ್ಟಿ ಮತ್ತು ವೃಷಭ್ ಶೆಟ್ಟಿ ಅಭಿನಯದ ಹೊಸ ಸಿನಿಮಾ, “ಗರುಡ ಗಮನ ವೃಷಭ ವಾಹನ” ಶುಕ್ರವಾರವಷ್ಟೇ ರಿಲೀಸ್ ಆಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಕೂಡ ಸಖತ್ ಹಿಟ್ ಆಗಿದ್ದು, ಕನ್ನಡಿಗರ ಅಪಾರ ಗಮನ ಸೆಳೆದಿದೆ. ಈ ಸಿನಿಮಾದ ಟ್ರೈಲರ್ ನಿಂದ ಪ್ರೇರಿತರಾಗಿ ಕಾರ್ಕಳ ನೀರೆಯ ತಂಡವೊಂದು ಅಂತದ್ದೇ ಒಂದು ಆಕರ್ಷಕ ಟ್ರೈಲರ್ ಅನ್ನು ಯುಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು, ದಿನದಿಂದ ದಿನಕ್ಕೆ ವೈರಲ್ ಆಗ್ತಿದೆ.

ಅಂದ ಹಾಗೆ ಈ ಟ್ರೈಲರ್ ಗೆ ಕಾನ್ಸೆಪ್ಟ್, ಸಿನಿಮಾಟೋಗ್ರಫಿ, ಹಾಗೂ ಎಡಿಟಿಂಗ್ ಅನ್ನು ರಂಜಿತ್ ನೀರೆ ಅವರು ಮಾಡಿದ್ದಾರೆ.
ಅಭಿನಯದಲ್ಲಿ ಅಭಿಲಾಶ್ ಶೆಟ್ಟಿ, ಸುಜಿತ್ ನಾಯಕ್, ವಿಜಿತ್ ಕುಲಾಲ್ ಸುಮಿತ್ ಸಾಲಿಯಾನ್, ಆಕಾಶ್ ಶೆಟ್ಟಿ, ಆದರ್ಶ ಶೆಟ್ಟಿ, ಆದಿತ್ಯ ಶೆಟ್ಟಿ, ಪ್ರತಿಷ್ ಭಂಡಾರಿ, ವಿರಾಜ್ ಹೆಗ್ಡೆ, ಜಗದೀಶ್ ಪೂಜಾರಿ, ಪ್ರಶಾಂತ್ ಮೊಯ್ಲಿ, ಅಶೋಕ್ ನಾಯಕ್, ಶಂಕರ್ ವಿಷ್ಣು ಪೆರ್ಡೂರು ಮಿಂಚಿದ್ದು, ಶಂಕರ್ ಕಣಜಾರು, ಗಣೇಶ್ ಭಂಡಾರಿ, ಸುನಿಲ್ ಶೆಟ್ಟಿ, ಪವನ್ ಕಣಜಾರು ಮತ್ತು ರೋಷನ್ ಕುಂಟಾಡಿ ಬೆಂಬಲವಿದೆ.

ಈ ಟ್ರೈಲರ್ ಗೆ ನಟ, ನಿರ್ದೇಶಕ ರಿಷಬ್ ಶೆಟ್ಟಿ “ಥಾಂಕ್ಯೂ ಗೈಸ್, ಟ್ರೈಲರ್ ತುಂಬಾ ಚೆನ್ನಾಗಿ ಮಾಡಿದ್ದೀರಾ. ನಿಮಗೆ ಅಲ್ ದಿ ಬೆಸ್ಟ್. ಮುಂದಿನ ದಿನಗಳಲ್ಲಿ ನೀವು ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆಯಿರಿ” ಎಂದು ಯುವಕರ ತಂಡಕ್ಕೆ ಶುಭಹಾರೈಸಿದ್ದಾರೆ.

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.