



ಮೊನ್ನೆಯಷ್ಟೆ ಫೇಸ್‌ಬುಕ್ ವಾಟ್ಸಾಪ್ ಇನ್ಟಾಗ್ರಾಂ ಸರ್ವರ್ ಡೌನ್ ಆಗಿದ್ದು ಗೊತ್ತು. ಇಂದು ಜೀಯೋ ಸರದಿ ದೇಶದ ಹಲವೆಡೆ ಜಿಯೋ ಮೊಬೈಲ್ ನೆಟ್ ವರ್ಕ್ ಡೌನ್ ಆಗಿದ್ದು, ಈ ಕುರಿತು ಹಲವಾರು ಮಂದಿ ಜಿಯೋ ಬಳಕೆದಾರರು ಟ್ವಿಟರ್ ನಲ್ಲಿ ನೆಟ್ ವರ್ಕ್ ಡೌನ್ ಆಗಿದೆ ಎಂದು ದೂರುಗಳನ್ನು ನೀಡಿದ್ದಾರೆ.#jioddown ಎಂಬುದು ಟ್ವಿಟರ್ ಟ್ರೆಂಡಿಂಗ್ ಕೂಡಾ ಆಗಿದ್ದು, ಡೌನ್ ಡಿಟೆಕ್ಟರ್ (Downdetector)ನಲ್ಲಿ ಸುಮಾರು 4000 ಮಂದಿ ಬೆಳಗ್ಗೆಯಿಂದ ಜಿಯೋ ನೆಟ್ ವರ್ಕ್ ಸಮಸ್ಯೆ ಇದೆ ಎಂದು ದೂರು ನೀಡಿದ್ದಾರೆ. ರಿಲಯನ್ಸ್ ಜಿಯೋದ ಅಧಿಕೃತ ಗ್ರಾಹಕ ಸೇವಾ ಟ್ವಿಟರ್ ಖಾತೆಯಾದ @JioCare ಖಾತೆಗೆ ಸಾಕಷ್ಟು ಮಂದಿ ದೂರುಗಳನ್ನು ನೀಡಿದ್ದಾರೆ. ದೇಶದ ವಿವಿಧ ಕಡೆಗಳಿಂದ ಈ ದೂರುಗಳು ಬಂದಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಯೋ ನಿಮಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದಿದೆ. ಇದರ ಜೊತೆಗೆ ಇಂಟರ್ನೆಟ್ ಸೇವೆಗಳನ್ನು ಬಳಸುವಾಗ ಮತ್ತು ಕರೆ/ಎಸ್‌ಎಂಎಸ್ ಮಾಡುವಾಗ ಇಂತಹ ಸಮಸ್ಯೆ ಎದುರಾಗಬಹುದು. ಈ ಸಮಸ್ಯೆ ತಾತ್ಕಾಲಿಕವಾಗಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಜಿಯೋ ಹೇಳಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.