



ಕಾರ್ಕಳ ಫೆ: ೧೮: ೨೦೦೪ ರಿಂದ ಕಾರ್ಕಳ ಕ್ಷೇತ್ರದಲ್ಲಿ ಮುಳಿ ಹುಲ್ಲಿನ ಮನೆಗಳಿಗೆ ಹಂಚು ವಿತರಣೆ, ಗ್ರಾಮಾಂತರ ಪ್ರದೇಶದ ಪ್ರತೀ ರಸ್ತೆಗಳಿಗೂ ಕಾಂಕ್ರೀಟಿಕರಣ ಹಾಗೂ ಡಾಮರೀಕರಣ, ಪ್ರತೀ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕಕ್ಕಾಗಿ ಸಾವಿರಾರು ವಿದ್ಯುತ್ ಕಂಬಗಳ ಅಳವಡಿಕೆ, ವಿದ್ಯುತ್ ಸರಬರಾಜು, ಹಲವಾರು ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಿ ಕೃಷಿ ನೀರಾವರಿಗೆ ಆದ್ಯತೆ, ಕುಡಿಯುವ ನೀರಿನ ಸುವ್ಯವಸ್ಥೆ, ಅಸಂಖ್ಯಾತ ಸೇತುವೆಗಳ ನಿರ್ಮಾಣದಿಂದ ಈಗಾಗಲೇ ಕರ್ನಾಟಕ ರಾಜ್ಯದ ಅಭಿವೃದ್ಧಿ ಹರಿಕಾರರಾಗಿ ಗುರುತಿಸಿಕೊಂಡಿರುವ ಏಕೈಕ ಶಾಸಕರಾಗಿ ಸಚಿವರಾದ ಮೇಲೆ ಇಂಧನ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿರುವ ರೀತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನವಚೇತನ ನೀಡಿರುವುದಕ್ಕೆ ರಾಜ್ಯದ ಜನತೆಯಿಂದ ಭಾರಿ ಮೆಚ್ಚುಗೆಗೆ ಪಾತ್ರರಾಗಿರುವ ವಿ. ಸುನಿಲ್ ಕುಮಾರ್ ರವರು ಕಾರ್ಕಳ ತಾಲೂಕಿನ ಜನತೆಯ ಬಹು ವರ್ಷಗಳ ಕಾಲದ ಸಮಸ್ಯೆಯನ್ನು ನಿವಾರಿಸಲು ಕಂದಾಯ ಮೇಳ ನಡೆಸಿ ಕಡತ ವಿಲೇವಾರಿ ಸಪ್ತಾಹದ ಮೂಲಕ ತಾಲೂಕಿನ ಯಾವುದೇ ಗ್ರಾಮದ ಫಲಾನುಭವಿಗಳು ಸೌಕರ್ಯದಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಶ್ಲಾಘನೀಯ. ಕಡತ ವಿಲೇವಾರಿ ಸಪ್ತಾಹದ ಮೂಲಕ ಕಾರ್ಕಳ ತಾಲೂಕಿನ ವಿವಿಧ ಇಲಾಖೆಗಳ ಕಡತಗಳ ವಿಲೇವಾರಿ ಈಗಾಗಲೇ ನಡೆದಿದ್ದು ಫೆಬ್ರವರಿ ೧೯ ರಂದು ಬೃಹತ್ ಕಂದಾಯ ಮೇಳ ಕಾರ್ಕಳದ ಕುಕ್ಕುಂದೂರು ಮೈದಾನದಲ್ಲಿ ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ಪತ್ರ ನೀಡಲಾಗುವುದು. ಈ ಕಂದಾಯ ಮೇಳದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಂಡು ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ರವರ ಕಾರ್ಯವೈಖರಿ ಕಾರ್ಕಳ ಕ್ಷೇತ್ರವು ಕರ್ನಾಟಕಕ್ಕೆ ಮಾದರಿ ಕ್ಷೇತ್ರವಾಗುವಲ್ಲಿ ಜನತೆ ಸಹಕರಿಸಬೇಕಾಗಿ ಪತ್ರಿಕಾ ಪ್ರಕಟಣೆ ಮೂಲಕ ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.