




ಉಡುಪಿ: ವಿದ್ಯಾರ್ಥಿಯೊಬ್ಬ ಒಂದು ಹುಡುಗಿಯನ್ನು ಸೂಟ್ಕೇಸ್ ನಲ್ಲಿ ತುಂಬಿಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅ ವೀಡಿಯೋ ಮಣಿಪಾಲ ವಿವಿ ಹಾಸ್ಟೆಲ್ ಗೆ ಸೇರಿದ್ದು ಎನ್ನಲಾಗಿದ್ದು ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಇದೇ ವಿಷಯದಲ್ಲಿ ಟ್ವಿಟ್ಟರ್ ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಅಗುತ್ತಿರುವುದು ಮಾತ್ರ ಸತ್ಯ
ಸ್ಪಷ್ಟನೆ ಕೊಟ್ಟ ಮಾಹೆ: ಈ ವಿಡಿಯೋ ಮಣಿಪಾಲ ವಿವಿಗೆ ಸೇರಿದ್ದಲ್ಲ ಎಂದು ಮಣಿಪಾಲ ವಾಹೆಯ ಮಾಧ್ಯಮ ವಕ್ತಾರ ಎಸ್ ಪಿ ಕರ್ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ಈ ವಿಡಿಯೋ ನಕಲಿಯಾಗಿದೆ ಹಾಗೂ ಇದಕ್ಕೂ ಮಾಹೆ ಗು ಯಾವುದೇ ಕಾಲೇಜಿಗೂ ಸಂಬಂಧವಿಲ್ಲ.ಇದು ನಕಲಿ ವೀಡಿಯೋ ವಾಗಿದ್ದುಹಾಸ್ಟೆಲ್ ನ ಗೇಟ್ ಮಣಿಪಾಲ ಕ್ಯಾಂಪಸ್ ಗೆ ಹೋಲಿಕೆಯಾಗುವಂತಿದೆ. ಇದೇ ಕಾರಣಕ್ಕಾಗಿ ಇದನ್ನು ಮಣಿಪಾಲ ವಿವಿಯ ವಿಡಿಯೋ ಎಂದು ಬಿಂಬಿಸಲಾಗಿದೆ. ಆದರೆ ಇದು ಮಾರ್ಚ್ 20- 2019ರಲ್ಲಿ ರೆಕಾರ್ಡ್ ಆದ ವಿಡಿಯೋ ಆಗಿದೆ. ಇದು ಮಣಿಪಾಲ ಹಾಸ್ಟೆಲ್ ನಲ್ಲಿ ನಡೆದಿಲ್ಲ. ಬದಲಾಗಿ ಡೆಹ್ರಾಡೂನ್ ನಲ್ಲಿ ನಡೆದ ಘಟನೆಯಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.