logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಜ್ಞಾನಸುಧಾ : ಜೆ.ಇ.ಇ. ಮೈನ್ - 2024 ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: 35 ವಿದ್ಯಾರ್ಥಿಗಳಿಗೆ ಗೌರವ ಒಟ್ಟು 2.89 ಲಕ್ಷ ರೂ. ನಗದು ಪುರಸ್ಕಾರ ವಿತರಣೆ, ಜಿಲ್ಲೆಯಲ್ಲೇ 99.7ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಎಲ್ಲಾ ಮೂವರು ಜ್ಞಾನಸುಧಾದವರೆಂಬ ಹೆಗ್ಗಳಿಕೆ

ಟ್ರೆಂಡಿಂಗ್
share whatsappshare facebookshare telegram
17 Feb 2024
post image

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ 97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾದ 35 ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ವತಿಯಿಂದ 2.89ಲಕ್ಷ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಉಡುಪಿ ಜಿಲ್ಲೆಯಲ್ಲೇ 99.7ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಎಲ್ಲಾ 3 ವಿದ್ಯಾರ್ಥಿಗಳು ಜ್ಞಾನಸುಧಾದವರಾಗಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ. 99.7ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಮೂವರು ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು (99.7915 ಪರ್ಸಂಟೈಲ್), ಬಿಪಿನ್ ಜೈನ್ ಬಿ.ಎಂ. (99.7597 ಪರ್ಸಂಟೈಲ್,), ಚಿರಂತನ ಜೆ.ಎ. (99.7033 ಪರ್ಸಂಟೈಲ್) ಇವರಿಗೆ ತಲಾ 50ಸಾವಿರ ರೂಪಾಯಿಯನ್ನು, 99 ರಿಂದ 99.7 ಪರ್ಸಂಟೈಲ್ ಗಳಿಸಿದ ನಾಲ್ವರು ವಿದ್ಯಾರ್ಥಿಗಳಾದ ನಿಮೇಶ್ ಆರ್. ಆಚಾರ್ಯ (99.3876 ಪರ್ಸಂಟೈಲ್), ಕ್ಷೀರಾಜ್.ಎಸ್ ಆಚಾರ್ಯ (99.2864 ಪರ್ಸಂಟೈಲ್), ಶ್ರೀದ ಕಾಮತ್ (99.1100 ಪರ್ಸಂಟೈಲ್) ಹಾಗೂ ರಿಷಿತ್ ವೇಣು ಬಿಳಿಮಗ್ಗ (99.0854 ಪರ್ಸಂಟೈಲ್) ಇವರಿಗೆ ತಲಾ 25 ಸಾವಿರ ರೂಪಾಯಿಯೊಂದಿಗೆ ಸನ್ಮಾನಿಸಲಾಯಿತು.

ಜೊತೆಗೆ 98 ರಿಂದ 99ಪರ್ಸಂಟೈಲ್ ಗಳಿಸಿದ 11 ವಿದ್ಯಾರ್ಥಿಗಳಾದ ಕ್ಷಮಾ ಜಯಚಂದ್ (98.9824 ಪರ್ಸಂಟೈಲ್), ಎಂ.ಕೆ.ಮದನ್ ಗೌಡ (98.8580 ಪರ್ಸಂಟೈಲ್), ಚಿನ್ಮಯ್ ಎಸ್. ದೇಶಪಾಂಡೆ (98.8319 ಪರ್ಸಂಟೈಲ್), ದೇವಾಂಶ್ ದೀಪಕ್ ಬಿ. (98.5450 ಪರ್ಸಂಟೈಲ್), ಗಜೇಂದ್ರ ಜಿ. (98.5094 ಪರ್ಸಂಟೈಲ್), ರಿಯಾನ್ ಡಿ’ಸೋಜ (98.4799 ಪರ್ಸಂಟೈಲ್), ಸಮಿತ್ ಕೃಷ್ಣ. ಯು (98.3983 ಪರ್ಸಂಟೈಲ್), ಪ್ರಥಮ್ ಕುಮಾರ್ ಶೆಟ್ಟಿ (98.3920 ಪರ್ಸಂಟೈಲ್), ಖುಷಿ ಎಸ್ ಹೆಗ್ಡೆ (98.2207 ಪರ್ಸಂಟೈಲ್), ಆಕಾಂಕ್ಷ್ ಎನ್ ಮಲ್ಯ (98.1377 ಪರ್ಸಂಟೈಲ್), ಸಾತ್ವಿಕ್ ಜಿ. ಜೆ (98.1290 ಪರ್ಸಂಟೈಲ್) ಇವರಿಗೆ ತಲಾ 2ಸಾವಿರ ರೂಪಾಯಿಯೊಂದಿಗೆ ಪುರಸ್ಕರಿಸಲಾಯಿತು. ಹಾಗೆಯೇ 97ರಿಂದ 98 ಪರ್ಸಂಟೈಲ್ ಗಳಿಸಿದ 17 ವಿದ್ಯಾರ್ಥಿಗಳನ್ನು ತಲಾ 1 ಸಾವಿರ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಜ್ಞಾನಸುಧಾದ 408 ವಿದ್ಯಾರ್ಥಿಗಳು ಜೆ.ಇ.ಇ ಮೈನ್ 2024ರ ಮೊದಲ ಹಂತದ ಪರೀಕ್ಷೆ ಬರೆದಿದ್ದು 159 ವಿದ್ಯಾರ್ಥಿಗಳಿಗೆ 90ಕ್ಕಿಂತ ಅಧಿಕ ಪರ್ಸಂಟೈಲ್, 78 ವಿದ್ಯಾರ್ಥಿಗಳಿಗೆ 95ಕ್ಕಿಂತ ಅಧಿಕ ಪರ್ಸಂಟೈಲ್, 58 ವಿದ್ಯಾರ್ಥಿಗಳಿಗೆ 96ಕ್ಕಿಂತ ಅಧಿಕ ಪರ್ಸಂಟೈಲ್, 35 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ ಪರ್ಸಂಟೈಲ್, 18 ವಿದ್ಯಾರ್ಥಿಗಳಿಗೆ 98ಕ್ಕಿಂತ ಅಧಿಕ ಪರ್ಸಂಟೈಲ್, 7 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದಿರುತ್ತಾರೆ.

ಈ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಡಾ.ಮೋಹನ್ ಶೆಣೈ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪಿ.ಯು ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲ ಶ್ರೀ ಸಾಹಿತ್ಯ, ಉಡುಪಿ ಜ್ಞಾನಸುಧಾ ಪಿ.ಯು ಕಾಲೇಜು ಉಪಪ್ರಾಂಶುಪಾಲ ಶ್ರೀ ಸಂತೋಷ್, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಸಂಯೋಜಕರಾದ ಶ್ರೀ ಸಂದೀಪ, ಕೌನ್ಸಿಲರ್ ಡಾ. ಪ್ರಸನ್ನ ಹೆಗ್ಡೆ, ಪಿ.ಆರ್.ಓ. ಶ್ರೀಮತಿ ಜ್ಯೋತಿ ಪದ್ಮನಾಭ್ ಬಂಡಿ, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಉಷಾ ರಾವ್ ಯು, ನ್ಯೂಸ್ ಕಾರ್ಕಳ ಸಂಪಾದಕ ಶ್ರೀ ರಾಮಚಂದ್ರ ಬರೆಪ್ಪಾಡಿ, ಹಿತೈಷಿಗಳಾದ ಶ್ರೀ ತ್ರಿವಿಕ್ರಮ ಕಿಣಿ, ಶ್ರೀ ದೇವೇಂದ್ರ ನಾಯಕ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಸಾಧಕ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.