



49 ವರ್ಷಗಳಿಂದ ತಮ್ಮೆಲ್ಲರ ಸಹಕಾರ ಪ್ರೀತಿ ವಿಶ್ವಾಸದಿಂದ ವಿಜೃಂಭಣೆಯಿಂದ ಆಚರಿಸಲ್ಪಡುವ ಶಾರದಾ ಮಹೋತ್ಸವ 2021, ಈ ವರ್ಷ ಅಕ್ಟೋಬರ್ 10 ರಿಂದ 15 ರವರೆಗೆ ರಥಬೀದಿ ಶ್ರೀ ಗೋಕರ್ಣ ಮಠದಲ್ಲಿ ಆಚರಿಸಲಾಗುವುದು.6 ದಿನಗಳ ಕಾರ್ಯಕ್ರಮದಲ್ಲಿ ಭಕ್ತಾದಿಗಳು ತನು ಮನ ಧನದಿಂದ ಸಕ್ರಿಯವಾಗಿ ಭಾಗವಹಿಸಿ ಶ್ರೀ ಮಾತೆಯ ಆಶೀರ್ವಾದ ಪಡೆಯಬೇಕೆಂದು ಸಹೃದಯ ವಿನಂತಿ. ಪ್ರತಿದಿನ ಮಹಾಪೂಜೆ ಮಧ್ಯಾಹ್ನ 1 ಗಂಟೆಗೆ ಮತ್ತು ರಾತ್ರಿಯ ಪೂಜೆ 9 ಗಂಟೆಗೆ ತದನಂತರ ಪ್ರಸಾದ ವಿತರಣೆ.11 ಅಕ್ಟೋಬರ್ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ಮಧ್ಯಾಹ್ನ 1 ಗಂಟೆಗೆ ದೇವರಿಗೆ ಸುವರ್ಣ ಮಹೋತ್ಸವದ ಅಂಗವಾಗಿ ಬೆಳ್ಳಿ ಪೀಠ ಹಾಗೂ ಸ್ವರ್ಣ ಸೊಂಟ ಪಟ್ಟಿ ಸಮರ್ಪಣೆ. ಅಕ್ಟೋಬರ್ 15ರಂದು ಬೆಳಿಗ್ಗೆ 9.30 ಶ್ರೀ ದೇವರ ವಿಸರ್ಜನಾ ಪೂಜೆ ಸಾಯಂಕಾಲ 5 ಗಂಟೆಗೆ ಪೂರ್ಣಾಲಂಕಾರ ಶಾರದಾ ಮಾತೆಯ ದರ್ಶನ ಪಡೆಯಬಹುದು,ಶೋಭಾಯಾತ್ರೆ ಗೋಕರ್ಣ ಮಠದಿಂದ ಹೊರಟು ಶ್ರೀ ಮಹಾಮಾಯಾ ದೇವಸ್ಥಾನದ ಕೆರೆಯಲ್ಲಿ ವಿಧಿಪೂರ್ವಕವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಶ್ರೀ ದೇವರ ಸೇವೆ ದೇಣಿಗೆ ಇತ್ಯಾದಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀ ಸುಭಾಷ್ ಭಟ್ -9740000917
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.