



ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು (ಮೇ 6) ಮತ್ತೆ ಏರಿಕೆಯಾಗಿದೆ. ಸತತ ಮೂರು ದಿನಗಳಿಂದ ಚಿನ್ನಾಭರಣ ದರ ಏರಿಕೆಯಾಗುತ್ತಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 220 ರೂಪಾಯಿಗೆ ಏರಿಕೆಯಾಗಿದೆ. ಆ ಬಳಿಕ 62,450 ರೂಪಾಯಿ ಇದೆ. ನಿನ್ನೆ 62,230 ರೂಪಾಯಿ ಇತ್ತು. ಅದೇ ರೀತಿಯಾಗಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಹೆಚ್ಚಳದ ನಂತರ 57,250 ರೂಪಾಯಿಗೆ ಬಂದು ನಿಂತಿದೆ.
ನಿನ್ನೆ 57,050 ರೂಪಾಯಿ ಆಗಿದ್ದ ಒಂದು ಕೆಜಿ ಬೆಳ್ಳಿಯ ಬೆಲೆ ಇಂದು 83,700 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲಿ 900 ರೂಪಾಯಿ ಏರಿಕೆ ಕಂಡಿದೆ. ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇಂದು ಇದೇ ದರಗಳಲ್ಲಿ ಮಾರಾಟವಾಗುತ್ತಿವೆ.
ಚೆನ್ನೈನ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಏರಿಕೆಯಾಗಿ 57,750 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 270 ರೂಪಾಯಿ ಹೆಚ್ಚಳದ ಬಳಿಕ 63,000 ರೂಪಾಯಿಗೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ನಿನ್ನೆ 62,730 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಚೆನ್ನೈನಲ್ಲೂ ಕೆಜಿ ಬೆಳ್ಳಿ 83,700 ರೂಪಾಯಿ ಇದೆ.
ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,200 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 62,400 ರೂಪಾಯಿ ಇದೆ. ದೇಶದ ವಾಣಿಜ್ಯ ನಗರಿಯಲ್ಲಿ ಬೆಳ್ಳಿ ಬೆಲೆಯಲ್ಲಿ 1,150 ರೂಪಾಯಿ ಏರಿಕೆಯಾಗಿದೆ. ಪ್ರಸ್ತುತ ಅಲ್ಲಿ ಕೆಜಿ ಬೆಳ್ಳಿ ಬೆಲೆ 78,250 ರೂಪಾಯಿ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,350 ರೂ., 24 ಕ್ಯಾರೆಟ್ ಚಿನ್ನದ ಬೆಲೆ 62,550 ರೂಪಾಯಿಯಲ್ಲಿ ವ್ಯಾಪಾರ ಮುಂದುವರೆಯುತ್ತಿದೆ. ಇಲ್ಲಿ ಬೆಳ್ಳಿ ಬೆಲೆ 78,250 ರೂಪಾಯಿಗೆ ವಹಿವಾಟು ನಡೆಸುತ್ತಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.