



ಬೆಂಗಳೂರು: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆಯಾಗಿತ್ತು ಹಾಗೂ ಬೆಳ್ಳಿ ದರವೂ ಇಳಿಕೆ ಹಾಗೂ ಸ್ಥಿರವಾಗಿತ್ತು. ಆದರೆ ಗುರುವಾರ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆಯಾಗಿದೆ.
ಗುರುವಾರ 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,515 ಆಗಿದೆ. ನಿನ್ನೆಯ 5,500ಕ್ಕೆ ಹೋಲಿಸಿದರೆ 15 ರೂ., ಏರಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ ಇಂದು 6,016 ಆಗಿದೆ. ನಿನ್ನೆಯ 6,000 ರೂ.ಗೆ ಹೋಲಿಸಿದರೆ ಗುರುವಾರ 16 ರೂ ಏರಿಕೆ ಕಂಡಿದೆ. ಬೆಳ್ಳಿ 1 ಗ್ರಾಂಗೆ 76.50 ರೂ ಆಗಿದೆ.
ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಗುರುವಾರ ಚಿನ್ನ, ಬೆಳ್ಳಿಯ ದರದಲ್ಲಿ ತುಸು ಏರಿಕೆಯಾಗಿದೆ. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಚಿನ್ನ, ಬೆಳ್ಳಿ ದರ ಏರಿಕೆ ಕಂಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.