



ಬೆಂಗಳೂರು: ಕಳೆದ ತಿಂಗಳಿನಲ್ಲಿ ಪ್ರತಿದಿನ ಏರಿಳಿತ ಕಾಣುತ್ತಿದ್ದ ಚಿನ್ನದ ದರ ಆಗಸ್ಟ್ ಆರಂಭದಲ್ಲಿ ಇಳಿಕೆಯಾಗಿದ್ದು, ಬೆಳ್ಳಿಯ ದರ ಸ್ಥಿರವಾಗಿದೆ.
ಮಾರುಕಟ್ಟೆಯಲ್ಲಿ ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,525 ಆಗಿದೆ. ನಿನ್ನೆಯ 5,535 ಕ್ಕೆ ಹೋಲಿಸಿದರೆ 10 ರೂ., ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ ಇಂದು 6,028 ಆಗಿದೆ. ನಿನ್ನೆಯ 6,038 ರೂ.ಗೆ ಹೋಲಿಸಿದರೆ ಇಂದು 10 ರೂ ಇಳಿಕೆ ಕಂಡಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55,250 ರೂ. ಇದೆ. ಮಂಗಳೂರು 55,250 ರೂ., ಮೈಸೂರಿನಲ್ಲಿ 55,250 ರೂ. ಇದೆ. ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಚೆನ್ನೈನಲ್ಲಿ 55,500 ರೂ., ಮುಂಬೈನಲ್ಲಿ 55,250 ರೂ., ದೆಹಲಿಯಲ್ಲಿ 55,400 ರೂ., ಕೋಲ್ಕತಾದಲ್ಲಿ 55,250 ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60,140 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,550 ರೂ., ಮುಂಬೈನಲ್ಲಿ 60,280 ರೂ., ದೆಹಲಿಯಲ್ಲಿ 60,430 ರೂ., ಕೋಲ್ಕತಾದಲ್ಲಿ 60,280 ರೂ. ಇದೆ.
ಬೆಳ್ಳಿ ದರ ಸ್ಥಿರ
ರಾಜ್ಯದಲ್ಲಿ ಇಂದು ಬೆಳ್ಳಿ ದರವೂ ಸ್ಥಿರವಾಗಿದೆ. ಇಂದು ಒಂದು ಗ್ರಾಂ ಬೆಳ್ಳಿಗೆ 75.50 ರೂ., ಇದೆ. 8 ಗ್ರಾಂ ಬೆಳ್ಳಿಗೆ ಇಂದು 604 ರೂ., ಆಗಿದ್ದರೆ, 10 ಗ್ರಾಂ ಬೆಳ್ಳಿ ದರ ಇಂದು 755 ಆಗಿದೆ. ಇಂದು 100 ಗ್ರಾಂ ಬೆಳ್ಳಿ ದರ 7,550 ರೂ ಇದೆ. ಇಂದು ಕೆಜಿ ಬೆಳ್ಳಿಗೆ 75,500 ರೂ., ನೀಡಬೇಕು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.