



ಬೆಂಗಳೂರು: ಮಾರುಕಟ್ಟೆಯಲ್ಲಿ ನಿನ್ನೆ ಸ್ಥಿರವಾಗಿದ್ದ ಚಿನ್ನದ ದರ ಇಂದು ಏರಿಕೆಯಾಗಿದ್ದು, ಬೆಳ್ಳಿ ಅದೇ ದರದಲ್ಲಿ ಮುಂದುವರಿದಿದೆ.
ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,415 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5907 ರೂಪಾಯಿ ಇದೆ. ಕಳೆದ ಶುಕ್ರವಾರದಿಂದಲೂ ಸ್ಥಿರತೆ ಕಾಯ್ದುಕೊಂಡಿದ್ದ ಮಾರುಕಟ್ಟೆ ಬೆಲೆ ಇಂದು ಗ್ರಾಂನಲ್ಲಿ 5 ರುಪಾಯಿ ಹೆಚ್ಚಳ ಕಂಡಿದೆ.
ಬೆಂಗಳೂರಲ್ಲಿ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5415 ರೂ ಇದ್ದು, 10 ಗ್ರಾಂ ಬೆಲೆ 54,150 ರೂ ಇದೆ. 10 ಗ್ರಾಂ ಮೇಲೆ 50 ರುಪಾಯಿ ಏರಿಕೆ ಆಗಿದೆ
ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 54,550 ರೂ. 54,150 ರೂ. 54,150 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 54,300 ರೂ. ಆಗಿದೆ.
ಬೆಂಗಳೂರಲ್ಲಿ ಬೆಳ್ಳಿಯ ದರ ಸ್ಥಿರತೆ ಕಾಯ್ದುಕೊಂಡಿದೆ. ಒಂದು ಗ್ರಾಂ ಬೆಳ್ಳಿಯ ದರ 72.50 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 725 ರೂಪಾಯಿ ಇದೆ. ಬೆಳ್ಳಿಯ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.