logo
WhatsApp Image 2026-04-02 at 14.46.04.jpeg
hindalco everlast.jpeg

ಮತ್ತೆ ಏರಿಕೆಯಾದ ಬಂಗಾರ ದರ

ಟ್ರೆಂಡಿಂಗ್
share whatsappshare facebookshare telegram
19 Jul 2023
post image

ಬೆಂಗಳೂರು: ಕಳೆದ ಕೆಲವು ದಿನಗಳಲ್ಲಿ ಬಹುತೇಕ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ ದಾಖಲಿಸಿದೆ. ಕರ್ನಾಟಕದಲ್ಲಿ ಅಪರಂಜಿ ಮತ್ತು 22 ಕ್ಯಾರೆಟ್‌ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇದೇ ಸಮಯದಲ್ಲಿ ಇಂದು ಬೆಳ್ಳಿ ದರವೂ ಹೆಚ್ಚಾಗಿದೆ.

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,510 ರೂ ಇದೆ. ನಿನ್ನೆಯ 5,498 ರೂ ದರಕ್ಕೆ ಹೋಲಿಸಿದರೆ 12 ರೂ. ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,080 ರೂ ಆಗಿದೆ. ನಿನ್ನೆ 43,984 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 96 ರೂ. ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,100 ರೂ. ಇದೆ. ನಿನ್ನೆಯ 54,980 ರೂ. ಗೆ ಹೋಲಿಸಿದರೆ 120 ರೂ. ಏರಿಕೆಯಾಗಿದೆ.

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ 6,010 ರೂ. ಇದೆ. ನಿನ್ನೆಯ 5,998 ರೂ.ಗೆ ಹೋಲಿಸಿದರೆ 12 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,080 ರೂ. ನೀಡಬೇಕಾಗುತ್ತದೆ. ನಿನ್ನೆ 47,984 ರೂ. ಇತ್ತು. ಇಂದು 96 ರೂ. ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,100 ರೂ. ಇದೆ. ನಿನ್ನೆಯ 59,980 ರೂ.ಗೆ ಹೋಲಿಸಿದರೆ 120 ರೂ. ಏರಿಕೆಯಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.