



ಬೆಂಗಳೂರು: ಭಾರತದಲ್ಲಿ ಈ ವಾರವಿಡೀ ಚಿನ್ನದ ದರ ಇಳಿಮುಖವಾಗಿದ್ದು, ಚಿನ್ನಾಭರಣ ಖರೀದಿಸುವವರ ಮೊಗದಲ್ಲಿ ಸಂತಸ ತಂದಿದೆ. ನಿನ್ನೆಯೂ ಚಿನ್ನದ ದರ ಇಳಿಕೆ ಕಂಡಿದ್ದು, ಇಂದು ಶನಿವಾರ ತುಸು ಹೆಚ್ಚೇ ದರ ಇಳಿಕೆಯಾಗಿದೆ.
ರಾಜ್ಯದಲ್ಲಿ ಇಂದು ಚಿನ್ನದ ದರ ಇಳಿಕೆ ಕಂಡಿದೆ. ವಿಶೇಷವಾಗಿ 22 ಕ್ಯಾರೆಟ್ ಚಿನ್ನ ಖರೀದಿಸುವವರು ತುಸು ಹೆಚ್ಚೇ ಹಣ ಉಳಿತಾಯ ಮಾಡಬಹುದು. ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,410 ರೂ. ಇದೆ. ನಿನ್ನೆಯ 5,450 ರೂ. ಗೆ ಹೋಲಿಸಿದರೆ 40 ರೂಪಾಯಿ ಇಳಿಕೆಯಾಗಿದೆ. ಮೊನ್ನೆಗೆ ಹೋಲಿಸಿದರೆ ಇಂದು ಎರಡು ಪಟ್ಟು ದರ ಇಳಿಕೆ ಕಂಡಿದೆ.
ನಿನ್ನೆಯ 43,600 ರೂ.ಗೆ ಹೋಲಿಸಿದರೆ ದರ 320 ರೂ.ನಷ್ಟು ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,100 ರೂ. ಇದೆ. ನಿನ್ನೆಯ 54,500 ರೂ.ಗೆ ಹೋಲಿಸಿದರೆ ಇಂದು 400 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನದ ದರ ಇಂದು 5,41,000 ರೂ.ಗೆ ತಲುಪಿದ್ದು, ನಿನ್ನೆಯ 5,45,000 ರೂ.ಗೆ ಹೋಲಿಸಿದರೆ ಇಂದು 4,000 ರೂ. ಇಳಿಕೆ ಕಂಡಿದೆ.
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,902 ರೂ. ಇದೆ. ನಿನ್ನೆಯ 5,945 ರೂ.ಗೆ ಹೋಲಿಸಿದರೆ ಇಂದು 43 ರೂ. ಇಳಿಕೆ ಕಂಡಿದೆ. ನಿನ್ನೆಯ 47,560 ರೂ.ಗೆ ಹೋಲಿಸಿದರೆ ಇಂದು 344 ರೂ. ಇಳಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,020 ರೂ. ಇದೆ. ನಿನ್ನೆಯ 59,450 ರೂ.ಗೆ ಹೋಲಿಸಿದರೆ ಇಂದು 430 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,90,200 ರೂ. ನೀಡಬೇಕು. ನಿನ್ನೆಯ 5,94,500 ರೂ.ಗೆ ಹೋಲಿಸಿದರೆ ಇಂದು 4,300 ರೂ. ಕಡಿಮೆಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.