



ಸಾಧನ ಜಿ ಆಶ್ರೀತ್ ರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್
ಕಾರ್ಕಳ: ಕಾರ್ಕಳ ಸುಮೇಧ ಫ್ಯಾಶನ್ ಇನ್ಸ್ ಟ್ಯೂಟ್ ಹಾಗೂ ಸುಮೇಧ ಡಿಸೈನರ್ ಬುಟಿಕ್ ಸಂಸ್ಥಾಪಕಿ ಸಾಧನ ಜಿ. ಆಶ್ರೀತ್ ರವರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ದೊರೆತಿದೆ ಸರ್ವಸಂತ್ರಪ್ತಿ ವೆಂಚರ್ಸ್ ಬೆಂಗಳೂರು ಆಶ್ರಯದಲ್ಲಿ ಬೆಂಗಳೂರಿನ ಆರ್ ಜಿ ರೋಯಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ತಾರ ಮ್ಯಾಗಜೀನ್ ಸಂಪಾದಕ ಶಿವಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು ಫ್ಯಾಶನ್ ಡಿಸೈನಿಂಗ್ ಕಾಲೇಜ್ ಗಳಲ್ಲಿ 12 ವರ್ಷದ ಅನುಭವಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದು . ಧಾರಾವಾಹಿಗಳಿಗೆ, ಪ್ಯಾಷನ್ ಇವೆಂಟ್ ಗಳಿಗೆ, ಕಾಸ್ಟ್ಯೂಮ್ ಡಿಸೈನರಾಗಿ ಮತ್ತು ಅನೇಕ ಹೆಣ್ಣು ಮಕ್ಕಳಿಗೆ ಉಚಿತ ತರಬೇತಿಗಳನ್ನು ನೀಡಿ ಅವರಲ್ಲಿ ಆತ್ಮ ಸ್ಥೈರ್ಯ ಕೊಟ್ಟು ಸ್ವಂತ ಉದ್ಯೋಗ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ. ತಮ್ಮಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳಿಗೆ ಹಾಗೂ ಫ್ಯಾಶನ್ ಡಿಸೈನಿಂಗ್ ಆಗಿರುವಂತಹ ಬೇರೆ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿ ಕೊಡುವ ಜೊತೆಗೆ ಅನೇಕ ಮಹಿಳೆಯರಿಗೆ ತಮ್ಮಲ್ಲಿ ಉದ್ಯೋಗವನ್ನು ನೀಡಿರುತ್ತಾರೆ ಇವರ ಸಾಧನೆಗೆ ಗುರುತಿಸಿ ಇವರಿಗೆ ಬೆಂಗಳೂರಿನಲ್ಲಿ ನಡೆದ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ (Golden Women's Achievers Award) ಕಾರ್ಯಕ್ರಮದಲ್ಲಿ ಇವರಿಗೆ ಗೋಲ್ಡನ್ ವುಮೆನ್ಸ್ ಅಚಿವರ್ಸ್ ಅವರ್ಡ್ ಪ್ರಶಸ್ತಿ ದೊರಕಿದೆ ಹಾಗೂ ಇವರು ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ ಈ ಸಂದರ್ಭದಲ್ಲಿ ಕಾರ್ಲ್ಟನ್ ಇವೆಂಟ್ ಮ್ಯಾನೇಜ್ಮೆಂಟ್ ಮುಖ್ಯಸ್ಧ ಬಸವರಾಜ್ , ಕಿರುತೆರೆ ನಟ ನಟಿ ಯರು ನಿರ್ದೇಶಕರು , ಕಿರುತೆರೆಯ ತಾಂತ್ರಿಕ ವರ್ಗದವರು ಉಪಸ್ಥಿತರಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.