logo
WhatsApp Image 2026-04-02 at 14.46.04.jpeg
hindalco everlast.jpeg

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಗುಡ್ ನ್ಯೂಸ್:NICL ನಲ್ಲಿದೆ 500 ಹುದ್ದೆಗಳು, ಆಸಕ್ತಿ ಇದ್ರೆ ಅರ್ಜಿ ಸಲ್ಲಿಸಿ

ಟ್ರೆಂಡಿಂಗ್
share whatsappshare facebookshare telegram
22 Jul 2026
post image

NICL Assistant Recruitment 2026: ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಗುಡ್ ನ್ಯೂಸ್.! ಇನ್ಶೂರೆನ್ಸ್ ವಲಯದ ಪ್ರಮುಖ ಕಂಪನಿಯಾದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ದೇಶಾದ್ಯಂತ ಒಟ್ಟು 500 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ಹಾಗೂ ವಿಮಾ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಪದವೀಧರ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆ ವಿವರ:

ದೇಶಾದ್ಯಂತ ಒಟ್ಟು 500 ಅಸಿಸ್ಟೆಂಟ್ ಹುದ್ದೆಗಳು ಅದರಲ್ಲಿ ಕರ್ನಾಟಕದಲ್ಲೇ ಒಟ್ಟು 30 ಹುದ್ದೆಗಳಿಗೆ ನೇಮಕಾತಿ ನಡೆಯುತಿದೆ. ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಪ್ರಾದೇಶಿಕ ಭಾಷೆಯನ್ನು (ಕರ್ನಾಟಕದಲ್ಲಿ ಕನ್ನಡ) ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು.

• ವಯೋಮಿತಿ (01 ಜುಲೈ 2026 ಕ್ಕೆ ಅನ್ವಯಿಸುವಂತೆ): ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ. {ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ}

ಅರ್ಜಿ ಶುಲ್ಕ: • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ₹850 • SC/ST/ಮಾಜಿ ಸೈನಿಕ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಆರಂಭಿಕ ಮೂಲ ವೇತನ ₹36,290 ಇರಲಿದ್ದು, ಭತ್ಯೆಗಳೂ ಸೇರಿ ಮೆಟ್ರೋ ನಗರಗಳಲ್ಲಿ ಮಾಸಿಕ ವೇತನ ಸುಮಾರು ₹63,000 ವರೆಗೆ ಇರಲಿದೆ. ಪ್ರಮುಖ ದಿನಾಂಕ:

• ಅರ್ಜಿ ಸಲ್ಲಿಕೆ ಆರಂಭ: ಜುಲೈ 18, 2026 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 7, 2026 • ಪೂರ್ವಭಾವಿ ಪರೀಕ್ಷೆ: ಆಗಸ್ಟ್ 27, 2026 • ಮುಖ್ಯ ಪರೀಕ್ಷೆ: ಅಕ್ಟೋಬರ್ 30, 2026

ನೇಮಕಾತಿ ಅಧಿಸೂಚನೆ: https://nationalinsurance.nic.co.in/sites/default/files/2026-07/NICL%20ASSISTANT%20-%20Recuritment%20Advertisment%202026-27%20%28Final%29.pdf ಅರ್ಜಿ ಸಲ್ಲಿಕೆ ಲಿಂಕ್: https://ibpsreg.ibps.in/nicljul26/

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.