



ನವದೆಹಲಿ: ಗೂಗಲ್‌ನ ಅತ್ಯಂತ ಪ್ರಮುಖ ಉತ್ಪನ್ನವಾಗಿರುವ Gmail Mobile App ಗಾಗಿ ಬಹುಬೇಡಿಕೆಯ ಫೀಚರ್ ಒಂದನ್ನು ಗೂಗಲ್ ಇದೀಗ ಒದಗಿಸಿದೆ.
ಭಾಷಾಂತರ ಆಯ್ಕೆ (ಗೂಗಲ್ ಟ್ರಾನ್ಸ್‌ಲೇಟ್) ಇನ್ಮುಂದೆ Gmail Appನಲ್ಲಿ ನೇರವಾಗಿ ಸಿಗಲಿದೆ ಎಂದು ಗೂಗಲ್ ಹೇಳಿದೆ. ಬಳಕೆದಾರರು ತಮಗೆ ಬಂದ ಮೇಲ್‌ಗಳನ್ನು ತಮಗೆ ಬೇಕಾದ ಭಾಷೆಯಲ್ಲಿ ಅಲ್ಲಿಯೇ ಬದಲಾಯಿಸಿಕೊಂಡು ಓದಬಹುದು, ಹಾಗೂ ಮೇಲ್ ಕಳಿಸುವಾಗ ಬೇಕಾದರೆ ಭಾಷೆ ಬದಲಾಯಿಸಿಕೊಳ್ಳಬಹುದು.
ಇಷ್ಟುದಿನ ಇದು Gmail App ನಲ್ಲಿ ನೇರವಾಗಿ ಸಿಗುತ್ತಿರಲಿಲ್ಲ. ಈ ಫೀಚರ್ ಒದಗಿಸಿ ಕೊಡುವಂತೆ ಸಾಕಷ್ಟು ಬೇಡಿಕೆಯಿತ್ತು ಎಂದು ಕಂಪನಿ ಹೇಳಿದೆ. ಬಳಕೆದಾರರು ತಮಗೆ ಬೇಕಾದ ಭಾಷೆಗಳಲ್ಲಿ ಸೇವೆ ಲಭಿಸುವಂತೆ ಆಯ್ಕೆಮಾಡಿಕೊಳ್ಳಬಹುದಾಗಿದೆ. ಅಂದರೆ ಮ್ಯಾನುವಲ್ ಆಗಿ Translate ಆಯ್ಕೆಯನ್ನು ನಿಭಾಯಿಸಬಹುದು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.