logo
WhatsApp Image 2026-04-02 at 14.46.04.jpeg
hindalco everlast.jpeg

ಸಣ್ಣ ವಹಿವಾಟುಗಳಿಗಾಗಿ UPI LITE ಪರಿಚಯಿಸಿದ ಗೂಗಲ್ ಪೇ

ಟ್ರೆಂಡಿಂಗ್
share whatsappshare facebookshare telegram
14 Jul 2023
post image

ನವದೆಹಲಿ: ಯುಪಿಐ ಪಿನ್ ನಮೂದಿಸದೆ ಅತ್ಯಂತ ತ್ವರಿತವಾಗಿ ಮತ್ತು ಒಂದೇ ಕ್ಲಿಕ್ ಮೂಲಕ ವಹಿವಾಟು ನಡೆಸಲು ನೆರವಾಗುವ ಯುಪಿಐ ಲೈಟ್ (UPI LITE) ಆ್ಯಪ್ ಅನ್ನು ಗೂಗಲ್ ಪೇ ಗುರುವಾರ ಪರಿಚಯಿಸಿದೆ.

ಯುಪಿಐ ಲೈಟ್ ಖಾತೆಯನ್ನು ದಿನಕ್ಕೆ ಎರಡು ಬಾರಿ 2,000 ರೂ.ವರೆಗೆ ಲೋಡ್ ಮಾಡಬಹುದು ಮತ್ತು 200 ರೂ.ವರೆಗೆ ತ್ವರಿತ ಯುಪಿಐ ವಹಿವಾಟುಗಳನ್ನು ನಡೆಸಬಹುದು ಎಂದು ಗೂಗಲ್‌ನ ಉತ್ಪನ್ನ ನಿರ್ವಹಣೆಯ ವಿಪಿ ಅಂಬರೀಷ್ ಕೆಂಗೆ ಹೇಳಿದರು.

ಗೂಗಲ್ ಪೇ ಅಪ್ಲಿಕೇಶನ್ ಬಳಕೆದಾರರು ತಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ UPI LITE ಅನ್ನು ಸಕ್ರಿಯಗೊಳಿಸಿ ಎಂಬುದನ್ನು ಟ್ಯಾಪ್ ಮಾಡಬಹುದು. ಲಿಂಕ್ ಮಾಡುವ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಬಳಕೆದಾರರು ತಮ್ಮ ಯುಪಿಐ ಲೈಟ್ ಖಾತೆಗೆ ರೂ 2,000 ವರೆಗೆ ಹಣವನ್ನು ಸೇರಿಸಲು ಸಾಧ್ಯವಾಗುತ್ತದೆ. ಇದರಲ್ಲಿ ದಿನಕ್ಕೆ ಗರಿಷ್ಠ ಮಿತಿ 4,000 ಆಗಿರುತ್ತದೆ.

ಯುಪಿಐ ಲೈಟ್ ಇದು ಲಭ್ಯವಿರುವ ಬ್ಯಾಲೆನ್ಸ್‌ ಮತ್ತು 200 ರೂ.ಗಿಂತ ಕಡಿಮೆ ವಹಿವಾಟು ಮೌಲ್ಯಗಳನ್ನು ಆಧರಿಸಿ ಯುಪಿಐ ಲೈಟ್ ಖಾತೆ ತಾನಾಗಿಯೇ ಡಿಫಾಲ್ಟ್ ಆಯ್ಕೆಯಾಗುತ್ತದೆ ಎಂದು ಕಂಪನಿ ಹೇಳಿದೆ. ವಹಿವಾಟನ್ನು ಪೂರ್ಣಗೊಳಿಸಲು ಬಳಕೆದಾರರು ‘ಪೇ ಪಿನ್-ಫ್ರೀ’ ಅನ್ನು ಟ್ಯಾಪ್ ಮಾಡಬೇಕು.

ಈವರೆಗೆ ಹದಿನೈದು ಬ್ಯಾಂಕ್‌ಗಳು UPI LITE ಬೆಂಬಲಿಸುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಇನ್ನೂ ಹೆಚ್ಚಿನ ಬ್ಯಾಂಕ್‌ಗಳು ಇದನ್ನು ಸಪೋರ್ಟ್ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.