logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಹಿಳೆಯರಲ್ಲಿ ಆರ್ಥೀಕ ಪುನಸ್ಚೇತನಗೊಳಿಸಲು ಹಾಗು ಸಬಲೀಕರಣಗೊಳಿಸಲು ಸರಕಾರವು ಒತ್ತು ನೀಡುತ್ತಿದೆ :ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ

ಟ್ರೆಂಡಿಂಗ್
share whatsappshare facebookshare telegram
23 May 2022
post image

ಕಾರ್ಕಳ : ದೇಶದ ೧೨೫ ಕೋಟಿ ಜನಸಂಖ್ಯೆಯಲ್ಲಿ ಎಲ್ಲರಿಗು ಸರಕಾರವು ಸರಕಾರಿ ಉದ್ಯೋಗ ನೀಡಲು ಕಷ್ಟಸಾಧ್ಯ , ಆದ್ದರಿಂದಾಗಿ ಸರಕಾರವು ಸ್ವ ಉದ್ಯೋಗ ಮಾಡಲು ಸ್ತಿಶಕ್ತಿ ಸಂಘಗಳನ್ನಾಗಿ ವಿಂಗಡಿಸುವ ಮೂಲಕ ಮಹಿಳೆಯರಲ್ಲಿ ಆರ್ಥೀಕ ಪುನಸ್ಚೇತನಗೊಳಿಸಲು ಹಾಗು ಸಬಲೀಕರಣಗೊಳಿಸಲು ಸರಕಾರವು ಒತ್ತು ನೀಡುತ್ತಿದೆ ಎಂದು ಮೀನುಗಾರಿಕ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ರಾಷ್ಟ್ರೀಯ ಗ್ರಾಮಿಣ ಮತ್ತು ಜೀವನೊಪಾಯ ಅಭಿಯಾನ ಇಲಾಖೆ ಸಹಯೊಗದಲ್ಲಿ ಸ್ರೀ ಶಕ್ತಿ ಸ್ವ ಸಹಾಯ ಗುಂಪು ಗಳ ಸಭೆ ಹಾಗೂ ಅಮೃತ ಬೀಜ ಧನ ಚೆಕ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು . ಹೆಚ್ಚುತ್ತಿರುವ ಜನಸಂಖ್ಯೆ ಹಾಗು ನಿರುದ್ಯೋವನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರವು ಪ್ರೋತ್ಸಾಹಧನವನ್ನು ನೀಡುತಿದೆ ಅದರ ಮೂಲಕ ಸಂಘಗಳು ಪುನಶ್ಚೇತನಗೊಂಡು ಸ್ವ ಉದ್ದಿಮೆಯನ್ನು ನಡೆಸಲು ನೆರವಾಗಲಿದೆ ಎಂದರು . ಉಡುಪಿ ಜಿಲ್ಲೆಯಲ್ಲಿ ೧೪೦ ಗುಂಪುಗಳು ರಚನೆಗೊಂಡು ಗ್ರಾಮಪಂಚಾಯತ್ ಮಟ್ಟದಲ್ಲಿ ವಿವಿಧ ಸ್ವ ಉದ್ದಿಮೆಯನ್ನು ನಡೆಸುತ್ತಿವೆ. ಜಿಲ್ಲೆಯಲ್ಲಿ ೩೦೭೦ ಸ್ತಿçÃಶಕ್ತಿ ಸಂಘಗಳಿದ್ದು ೪೪೦೦ ಮಹಿಳೆಯರು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ .ಆ ಗುಂಪುಗಳಿಗೆ ಸರಕಾರವು ೧ಲಕ್ಷ ಸಹಾಯಧನ ನೀಡುತ್ತಿದೆ ಎಂದು ಸಚಿವರು ಹೇಳಿದರು

ಗ್ರಾಮೀಣ ಭಾಗದ ನದಿಯಲ್ಲಿ ಸಿಗುವ ಮಡೆಂಜಿ ಮಲೆಜಿ ಮೀನುಗಳ ತಳಿಯಲ್ಲಿ ಔಷಧೀಯ ಗುಣಗಳಿದ್ದು ಈ ತಳಿಯನ್ನು ಅಭಿವೃಧ್ಧಿಪಡಿಸಲು ಮೀನುಗಾರಿಕಾ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಅದನ್ನು ಸಾಕಲು ಹೆಚ್ಚಿನ ಉತ್ತೇಜನ ನೀಡಲಾಗುವುದು ಇದರ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲಾಗುವುದು . ಎಂದರು

ಸಭೆ ಅಧ್ಯಕ್ಷತೆ ವಹಿಸಿದ್ದ ಇಂಧನ ಹಾಗೂ ಕನ್ನಡ ಸಂಸ್ಕೃತಿ ಕಾತೆ ಸಚಿವ ವಿ ಸುನಿಲ್ ಕುಮಾರ್ ಮಾತನಾಡಿ ಅವಿಭಾಜಿತ ಕಾರ್ಕಳ ತಾಲೂಕಿನ ೮೮ ಸ್ರೀಶಕ್ತಿ ಗುಂಪುಗಳನ್ನು ಗುರುತಿಸಿ ಒಂದು ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ನೀಡುತ್ತಿದೆ . ಸರಕಾರವು ಮಹಿಳಾ ಉದ್ದಿಮೆಗೆ ಕಿರು ಸದೃಢ ಗೊಳಿಸಲು ಪುನಶ್ಚೇತನಗೊಳಿಸಲು ಪ್ರೋತ್ಸಾಹ ನಿಡುತ್ತಿದೆ ಸದುಪಯೋಗ ಪಡಿಸಿಕೊಂಡು ಸದೃಢವಾಗÀಬೇಕು ಎಂದರು

ಜನರ ಕೈಹಿಡಿದ ಸರಕಾರದ ಅಮೃತ ಯೋಜನೆ : ರಾಜ್ಯ ಸರಕಾರವು ಈಗಾಗಲೆ ಅಮೃತ ಯೋಜನೆಯನ್ನು ಆರಂಭಿಸಿದ್ದು ಅಮೃತ್ ಗ್ರಾಮ ಪಂಚಾಯತ್ ಯೋಜನೆ ಆಯ್ಕೆಯಾದ ಪಂಚಾಯತ್ ಗಳಿಗೆ ೭೫ ಲಕ್ಷ ರೂಪಾಯಿಗಳ ಅನುದಾನ ನೀಡುತ್ತಿದೆ , ಅಮೃತ್ ಆರೋಗ್ಯ , ಶಾಲೆಗಳನ್ನು ಗುರುತಿಸಿ ಸಹಾಯಧನ ನೀಡುತ್ತಿದೆ ., ಅಮೃತ ಬೀಜ ಧನ ಯೋಜನೆಯಲ್ಲಿ ತಾಲೂಕಿಗೆ ೮೮ ಲಕ್ಷ ಪ್ರೋತ್ಸಾಹ ಧನ ನೀಡುತ್ತಿರುವುದು ಸಂತಸತAದಿದೆ ಈ ಮೂಲಕ ಸರಕಾರ ಜನರ ನ್ನು ಆರ್ಥೀಕ ಸದೃಢವನ್ನಾಗಿ ಮಾಡಲಿದೆ ಎಂದರು ಹೈನುಗಾರಿಕೆಗೆ ಕ್ಷೀರ ಸಮೃಧ್ದಿ ಬ್ಯಾಂಕ್: :ಅಂದಿನ ಯಡಿಯೂರಪ್ಪ ಸರಕಾರವು ಹಾಲಿಗೆ ಪ್ರತಿ ಲೀ. ಗೆ ೨ ರೂಗಳ ಪ್ರೋತ್ಸಾಹ ಧನ ನೀಡಿದ್ದು ಜನಪರ ಕಾಳಜಿ ತೋರಿತ್ತು . ಈಗ ಇಂದಿನ ಬೊಮ್ಮಾಯಿ ನೇತೃತ್ವದ ಸರಕಾರವು ಹೈನುಗಾರಿಕೆಗೆ ಕ್ಷೀರ ಸಮೃಧ್ದಿ ಬ್ಯಾಂಕ್ ಸ್ಥಾಪಿಸುವ ಮೂಲಕ ೫೦೦ ಕೋಟಿ ರೂ ಒದಗಿಸಿದೆ . ಮುಂದಿನ ದಿನಗಳಲ್ಲಿ ಕ್ಷೀರ ಸಮೃಧ್ದಿ ಬ್ಯಾಂಕ್ ಮೂಲಕ ಹೆಚ್ಚಿನ ರೈತರಿಗೆ ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗಲಿದೆ . ಸ್ವಾತಂತ್ರಕ್ಕೆ ೭೫ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ¸ರಕಾರದ ಎಲ್ಲಾ ಇಲಾಖೆಗಳಲ್ಲಿ ಹೊಸತನ ತರುವ ಸಲುವಾಗಿ À ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ವರ್ಷ ಪೂರ್ತಿ ಆಚರಣಾ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು ಸಮಸ್ಯೆ ಇತ್ಯರ್ಥ : ಕಳೆದ ೩೫ ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ೯೪ಛಿ ೯೪ಛಿಛಿ ಸಮಸ್ಯೆಯಿದ್ದ ಕಾರಣ ಹಕ್ಕು ಪತ್ರವಿಲ್ಲದೆ ಮನೆ ನಿರ್ಮಿಸಿದವರಿಗೆ ಬೊಮ್ಮಾಯಿ ನೇತೃತ್ವದ ಸರಕಾರ ಶುಭ ಸುದ್ದಿಯನ್ನು ನಿಡಿದ್ದು ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿದ್ದು ಸದ್ಯದಲ್ಲೆ ಹಕ್ಕುಪತ್ರನೀಡಲು ತಾಲೂಕು ಆಡಳಿತ ಸಿದ್ದವಾಗಲಿದೆ ಎಂದರು . ..ಎಸ್ ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ೧೧ ವಿದ್ಯಾರ್ಧಿಗಳನ್ನು ಸನ್ಮಾನಿಸಲಾಯಿತು. ಶಿವಪುರ ಸಂಜೀವಿನಿ ಸಂಘದ ಸದಸ್ಯರು ಬೆಳೆಸಿದ ಕಜೆ ಅಕ್ಕಿ ಯನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಯಿತು .. ಕು. ಸುಚಿತ ್ರ ೧೦ ಲಕ್ಷ ರೂ ಕೋವಿಡ್ ಚೆಕ್ ವಿತರಣೆ ಮಾಡಲಾಯಿತು . ಅಪರ ಜಿಲ್ಲಾಧಿಕಾರಿ ವೀಣಾ ಬಿ ಎನ್ ಹೆಬ್ರಿ ತಾ.ಪಂ ಕಾರ್ಯನಿರ್ವಾಹಣಾದಿಕಾರಿ ಶಶಿಧರ್ ,ಕಾರ್ಕಳ ತಾ.ಪಂ .ಕಾರ್ಯನಿರ್ವಾಹಣಾಧಿಕಾರಿ ಗುರುದತ್ , ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ , ಕಾರ್ಕಳ ತಹಶಿಲ್ದಾರರ್ ಪ್ರದೀಪ್ ಕುರ್ಡೆಕರ್ , ಮಹಿಳಾ ಕಲ್ಯಾಣ ಇಲಾಖೆ ಉಪನಿದೇಶಕಿ ವೀಣಾ ವಿವೇಕಾನಂದ ಉಪಸ್ಥಿತರಿದ್ದರು. ಗಣೇಶ್ ಜಲ್ಸೂರು ಕಾರ‍್ಯಕ್ರಮ ನಿರೂಪಿಸಿದರು .

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.