



ಬೆಂಗಳೂರು: ಪಹಣಿ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡುವ ಮೂಲಕ ಸರ್ಕಾರ ರೈತರಿಗೆ ಶಾಕ್ ನೀಡಿದೆ. 15 ರೂಪಾಯಿ ಇದ್ದ ಪಹಣಿ ದರವನ್ನು 25 ರೂ.ಗೆ ಹೆಚ್ಚಳ ಮಾಡಿ ಸರಕಾರ ಆದೇಶಿಸಿದೆ. ಸಬ್ಸಿಡಿಗೆ ಅರ್ಜಿ ಸಲ್ಲಿಕೆ, ಆಸ್ತಿ ಮಾರಾಟ, ಬ್ಯಾಂಕುಗಳಲ್ಲಿ ಸಾಲ ಸೇರಿದಂತೆ ಹಲವು ಕಾರಣಕ್ಕೆ ಪಹಣಿ ಅಗತ್ಯವಾಗಿದ್ದು, ನಾಡಕಚೇರಿ, ತಹಶೀಲ್ದಾರ್ ಕಚೇರಿ, ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ರೈತರು ಪಹಣಿ ಪಡೆದುಕೊಳ್ಳಬೇಕಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಹಣಿಗೆ 5 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈಗ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಪಹಣಿ ಪಡೆಯಲು 30 ರೂಪಾಯಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.