



ಬೆಂಗಳೂರು: ವೈಜ್ಞಾನಿಕವಾಗಿ ತೆರಿಗೆ ನಿಗದಿ ಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಎಲ್ಲಾ ಗ್ರಾಮ ಪಂಚಾಯತಿ ಗಳ ವ್ಯಾಪ್ತಿ ಯ ಕೃಷಿ ಭೂಮಿ ಕಟ್ಟಡ ಗಳು ಸೇರಿದಂತೆ ಸಮೀಕ್ಷೆ ನಡೆಸಿ ತೆರಿಗೆ ನಿಗದಿ ಗೊಳಿಸುವಂತೆ ಸರಕಾರ ಆದೇಶ ಹೊರಡಿಸಿದೆ
ಇದರ ನಡುವೆ ಸಮೀಕ್ಷೆ ಗೆ ಮೂರು ತಿಂಗಳ ಕಾಲಾವಕಾಶ ನೀಡಿದ್ದು ತುಮಕೂರು ಜಿಲ್ಲೆಯ 330 ಪಂಚಾಯಿತಿಗಳಲ್ಲಿ ಈಗಾಗಲೇ ಪ್ರಾಯೋ ಗಿಕವಾಗಿ ಸಮೀಕ್ಷೆ ನಡೆಸಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ 5,619 ಪಂಚಾಯಿತಿಗಳಲ್ಲೂ ವಿಸ್ತರಿಸಲಾಗುತ್ತಿದೆ.
ನಿಗದಿತ ನಮೂನೆಯಲ್ಲಿ ಆಸ್ತಿಗಳು, ಮಾಲೀಕರ ವಿವರ ಸಂಗ್ರಹಿಸಬೇಕು. ಗ್ರಾಮ ಠಾಣಾ, ಭೂ ಪರಿ ವರ್ತಿತ ಜಮೀನು, ವಿನ್ಯಾಸ ನಕ್ಷೆ ಅನುಮೋದಿತ ಬಡಾವಣೆ, ಸರ್ಕಾರದ ವಸತಿ ಯೋಜನೆ, ಸಾರ್ವಜನಿಕ ಆಸ್ತಿಗಳನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ಎಲ್ಲ ದಾಖಲೆಗಳ ಪ್ರತಿಗಳನ್ನು ಸಂಗ್ರಹಿಸಬೇಕು. ಮಾಲೀಕರ ಸಮ್ಮುಖದಲ್ಲೇ ದಾಖಲೆಗಳ ವಿವರ ಹಾಗೂ ಅವರ ಆಸ್ತಿ ತೆರಿಗೆ ದೃಢೀಕರಿಸಬೇಕು. ಕ್ರಮಬದ್ಧ ಆಸ್ತಿ ವಿವರಗಳನ್ನು ನಮೂನೆ 9 ಹಾಗೂ 11 'ಎ' ನಲ್ಲಿ, ಕ್ರಮ ಬದ್ಧವಲ್ಲದ ಆಸ್ತಿಗಳ ವಿವರಗಳನ್ನು 11 'ಬಿ' ನಲ್ಲಿ ದಾಖಲಿಸಬೇಕು. ನಂತರ ಇಲಾಖೆಯ ಪಂಚತಂತ್ರ 2.0ದಲ್ಲಿ ಅಳವಡಿಸಬೇಕು.ಪ್ರತಿ ಗ್ರಾಮದ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಕೈಗಾರಿಕಾ ಪ್ರದೇಶ ಗಳಲ್ಲಿ ಅಧಿಕಾರಿಗಳ ಜತೆ ಜಂಟಿ ಸಮೀಕ್ಷೆ ನಡೆಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆಯು ಮತ್ತಷ್ಟು ಹೆಚ್ಚಳವಾಗುವ ಸಂಭವವಿದೆ ಎನ್ನಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.