



ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರದ ತಾಲೂಕು ಮಟ್ಟದ ಕಂದಾಯ ಮೇಳ ವನ್ನು ಕಂದಾಯ ಸಚಿವ ಆರ್ ಅಶೋಕ್ ಉದ್ಘಾಟಿಸಿದರು .ಕುಕ್ಕುಂದೂರು ಪಂಚಾಯತ್ ಮೈದಾನದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಚಿವ ಆರ್ ಅಶೋಕ್ ಅರಣ್ಯ ಇಲಾಖೆಯ 15 ಲಕ್ಷ ಎಕರೆ ಜಾಗವನ್ನು ಮರಳಿ ರೈತರಿಗೆ ನೀಡಲು ಕ್ರಮಕೈಗೊಳ್ಳಲಾಗುವುದು ,ಅದರಂತೆಯೆ ರಾಜ್ಯದಲ್ಲಿನ ಸರ್ವೆ ಇಲಾಖೆಯಲ್ಲಿನ 800 ಅದಿಕಾರಿಗಳ ನೆಮಕ ಮಾಡಿದ್ದು ಮತ್ತೆ 800 ಹೊಸ ಅಧಿಕಾರಿಗಳ ನೇಮಕ ಮಾಡಲಾಗುವುದು ಅದರಂತೆಯೇ , ದಾಖಲೆಯನ್ನು ಮನೆ ಮನೆಗೆ ಉಚಿತವಾಗಿ ತಲುಪಿಸುವ ಸರಕಾರದ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನಿಡಲಾಗುವುದು ಎಂದರು
ಸಭೆಯಲ್ಲಿ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ ಕಾರ್ಕಳ ಕಂದಾಯಮೆಳವು ರಾಜ್ಯಕ್ಕೆ ಮಾದರಿಯಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದಾದ್ಯಂತ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗುವುದು . ಹಾಗೆಯೆ ಕಂದಾಯ ಮೇಳದಿಂದ 13700 ಸಾವಿರಕಡತಗಳು ಕಡ ಬಾಕಿಯಿತ್ತು ಅದರಲ್ಲಿ 11000 ಕಡತಗಳು ವಿಲೇವಾರಿ ಯಾಗಿ ಕಡತ ಮೇಳವು ಯಶಸ್ವಿ ಗೊಂಡಿದೆ. ಸಮಾಜದ ಪ್ರತಿಯೊಬ್ಬ ಕಟ್ಟಕಡೆಯ ಫಲಾನುಭವಿಗೂ ಇದರ ಪ್ರಯೋಜನವಾಗಬೇಕು ಕಾರ್ಯಕ್ರಮ ದಲ್ಲಿ . ಜಿಲ್ಲಾಧಿಕಾರಿ ಕೂರ್ಮರಾವ್ , ಸಹಾಯಕ ಕಮಿಷನರ್ ರಾಜು , ಉ.ಜಿ. ಕಾರ್ಯ ನಿರ್ವಣಾಧಿಕಾರಿ ನವೀನ್ ಭಟ್ ,ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ,ಕರ್ನಾಟಕ ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ,ಕಾರ್ಕಳ ಪುರಸಭೆ ಅದ್ಯಕ್ಷ ಸುಮ ಕೇಶವ್, ಕರಾವಳಿ ಅಭಿವೃದ್ಧಿ ನಿಗಮ ಅದ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ಕಾಪು ಲಾಲಾಜಿ ಮೆಂಡನ್ ಕಾರ್ಕಳ ಎ.ಪಿಎಂಸಿ ಅಧ್ಯಕ್ಷ ರತ್ನಾಕರ್ ಅಮೀನ್. ಹಾಗೂ ಇತರ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು ಕಾರ್ಕಳ ತಹಶಿಲ್ದಾರ್ ಪುರಂದರ, ಸ್ವಾಗತಿಸಿದರು ಇದೆ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸರಕಾರಿ ಸೌಲಭ್ಯಗಳನ್ನ 4367 ಫಲಾನುಭವಿ ಗಳಿಗೆ ವಿತರಿಸಲಾಯಿತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.