logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ರೈತರ ರಕ್ಷಣೆಗಾಗಿ ಹಾಲಿನ ದರ ಏರಿಕೆಗೆ ಸರ್ಕಾರ ಬದ್ಧ: ಪಶುಸಂಗೋಪನೆ ಸಚಿವ ಕೆ ವೆಂಕಟೇಶ್

ಟ್ರೆಂಡಿಂಗ್
share whatsappshare facebookshare telegram
12 Jul 2023
post image

ಸರ್ಕಾರ ಈಗಾಗಲೇ ಹಾಲಿನ ದರವನ್ನು ಹೆಚ್ಚಿಸುವ ಬಗ್ಗೆ ನಿರ್ಧಾರ ಮಾಡಿದ್ದು ಇದನ್ನು ಜಾರಿ ಮಾಡಲು ಆದೇಶ ಒಂದು ಬಾಕಿ ಇದೆ ಎಂದು ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಮತ್ತು ಎಸ್.ಎಲ್.ಭೋಜೇಗೌಡ ಅವರು ಹಾಲಿನ ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ಸಚಿವ ವೆಂಕಟೇಶ್, ಹಾಲು ಒಕ್ಕೂಟಗಳನ್ನು ಉಳಿಸುವ ಸಲುವಾಗಿ ಹಾಲಿನ ದರವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹಾಲಿನ ದರ ಹೆಚ್ಚಳದ ಪ್ರಸ್ತಾವನೆ ಸಿದ್ಧವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದ್ದೇನೆ. ಹಾಲಿನ ದರ ಏರಿಕೆಯ ಮಾಡುವ ಬಗ್ಗೆ ಅಂತಿಮ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ, ಆದರೆ ಸಿಎಂ ಜೊತೆ ಚರ್ಚಿಸಿದ ನಂತರ ಅದನ್ನು ಅಂತಿಮಗೊಳಿಸಲಾಗುವುದು ಎಂದರು.

ಬೆಲೆ ಪರಿಷ್ಕರಣೆಯ ಕೊರತೆ, ಹೆಚ್ಚುತ್ತಿರುವ ಆಮದು ವೆಚ್ಚಗಳು ಮತ್ತು ಖಾಸಗಿ ಡೈರಿಗಳ ತೀವ್ರ ಪೈಪೋಟಿಯು ಭಾರತದ ಎರಡನೇ ಅತಿದೊಡ್ಡ ಹಾಲು ಉತ್ಪಾದಕರಾದ ಕರ್ನಾಟಕದ ಹೈನುಗಾರರನ್ನು ಹತಾಶೆಗೆ ದೂಡುತ್ತಿದೆ. ಈ ಕಾರಣದಿಂದ ರಾಜ್ಯದಲ್ಲಿ ತಕ್ಷಣದಿಂದಲೇ ಹಾಲಿನ ದರ ಏರಿಕೆ ಮಾಡುವ ನಿರ್ಧಾರಕ್ಕೆ ಬರಬೇಕಿದೆ. ಹೊಸ ಈ ನಿಯಮಗಳು ಜಾರಿಗೆ ಬರುವುದರ ಜತೆಗೆ, ಹಾಲು ಒಕ್ಕೂಟಗಳು ರೈತರಿಗೆ 70% ಸಬ್ಸಿಡಿಯನ್ನು ವಿತರಿಸಬೇಕಾಗುತ್ತದೆ ಮತ್ತು ರಾಜ್ಯ ಸರ್ಕಾರವು ಬಿಡುಗಡೆ ಮಾಡುವ 30% ಸಬ್ಸಿಡಿಯನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶ ನೀಡಬಹುದು ಎಂದು ಅವರು ಹೇಳಿದರು. ಒಬಿಸಿ ಮತ್ತು ಸಾಮಾನ್ಯ ವರ್ಗದ ರೈತರಿಗೆ ಫೆಬ್ರವರಿಯಿಂದ ಬಾಕಿ ಉಳಿದಿರುವ ಮತ್ತು ಎಸ್‌ಸಿ/ಎಸ್‌ಟಿ ರೈತರಿಗೆ ಏಪ್ರಿಲ್‌ನಿಂದ ಬಾಕಿ ಉಳಿದಿರುವ ಹಾಲಿನ ಬಾಕಿಯನ್ನು ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

ಸರಕಾರ ಜಾತಿವಾರು ಅನುದಾನ ಬಿಡುಗಡೆ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಎಂಎಲ್ ಸಿ ವೈ.ಎ.ನಾರಾಯಣಸ್ವಾಮಿ, ಸರಕಾರ ಹಣ ಬಿಡುಗಡೆ ಮಾಡುವಾಗ ಎಸ್ ಸಿ/ಎಸ್ ಟಿ ಮತ್ತು ಸಾಮಾನ್ಯ ರೈತರಿಗೆ ಬೇರೆ ಬೇರೆ ಮಾನದಂಡಗಳನ್ನು ಅಳವಡಿಸಿಕೊಳ್ಳಬಾರದು ರೈತರನ್ನು ಜಾತಿವಾರು ವಿಂಗಡಣೆ ಮಾಡದೆ ಒಂದೇ ಘಟಕವಾಗಿ ನೋಡಬೇಕು ಎಂದು ಆಗ್ರಹಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.