logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಯುವ ಭಾರತೀಯ ಶಾಸ್ತ್ರೀಯ ಗಾಯಕರಿಗೆ ಪ್ರಪ್ರಥಮ ರಾಷ್ಟ್ರೀಯ ಸ್ಫರ್ಧೆಯನ್ನು ಆಯೋಜಿಸಿದ ಗ್ರೇಸ್ ಫೌಂಡೇಶನ್

ಟ್ರೆಂಡಿಂಗ್
share whatsappshare facebookshare telegram
9 Jul 2024
post image

ಜನಪ್ರಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ, ಪದ್ಮಭೂಷಣ ಪಂಡಿತ್ ಸಿ.ಆರ್.ವ್ಯಾಸ್ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಗುಣಿಜಾನ್ ರಿಸರ್ಚ್‌ ಆರ್ಟ್ ಕಲ್ಚರ್ ಆಂಡ್ ಎಜುಕೇಶನ್ (ಗ್ರೇಸ್) ಫೌಂಡೇಶನ್‌ ‘ಗುಣಿಜಾನ್ ಬಂದಿಶ್‌ ಪ್ರತಿಯೋಗಿತ” ಎಂಬ ಅಖಿಲ ಭಾರತ ಶಾಸ್ತ್ರೀಯ ಗಾಯನ ಸ್ಫರ್ಧೆಯನ್ನು ಆರಂಭಿಸಿದೆ. ಗ್ರೇಸ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಪಂಡಿತ್ ಸಿ.ಆರ್.ವ್ಯಾಸ್ ಅವರ ಪುತ್ರ ಶಶಿ ವ್ಯಾಸ್ ಅವರು ಈ ಪ್ರತಿಭಾ ಶೋಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಮತ್ತು ಈ ಕಾರ್ಯಕ್ರಮದ ರೂಪುರೇಷೆಯು ಪಂಡಿತ್ ಸಿ.ಆರ್.ವ್ಯಾಸ್ ಅವರ ಹಿರಿಯ ಶಿಷ್ಯೆ ಅಪರ್ಣಾ ಕೇಳ್ಕರ್ ನಿರ್ವಹಿಸಿದ್ದಾರೆ. 16 ರಿಂದ 30 ವರ್ಷದೊಳಗಿನ ವಯಸ್ಸಿನ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಈ ಸ್ಫರ್ಧೆಯು ಒಂದು ವೇದಿಕೆಯಾಗಲಿದೆ. ಅಭ್ಯರ್ಥಿಗಳು ಪುರುಷ ಮತ್ತು ಮಹಿಳೆ ಎಂಬ ವಿಭಾಗದಲ್ಲಿ ಸ್ಫರ್ಧಿಸಲಿದ್ದು, ಗಣ್ಯ ಕಲಾವಿದರು ರಚಿಸಿದ ಬಂದಿಷ್‌ಗಳನ್ನು ಪ್ರಸ್ತುತಪಡಿಸಲಿದ್ದಾರೆ. ಪ್ರತಿ ವಿಭಾಗದಲ್ಲಿ ಗೆಲ್ಲುವವರಿಗೆ ನಗದು ಬಹುಮಾನ ನೀಡಲಾಗುತ್ತದೆ.

ಆಯೋಜಕರ ಮಾತುಗಳು: ಗ್ರೇಸ್ ಫೌಂಡೇಶನ್‌ನ ಸಂಸ್ಥಾಪಕ ಶಶಿ ವ್ಯಾಸ್ ಹೇಳುವಂತೆ “ನನ್ನ ತಂದೆ ಪಂಡಿತ್ ಸಿ.ಆರ್.ವ್ಯಾಸ್ ಅವರಿಗೆ ಈ ಸ್ಫರ್ಧೆಯನ್ನು ಅರ್ಪಿಸಲಾಗಿದೆ. ಅವರು ತಮ್ಮ ಜೀವನವನ್ನೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಮೀಸಲಾಗಿಟ್ಟವರು. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ತಮ್ಮ ಕೌಶಲವನ್ನು ಪ್ರದರ್ಶಿಸುವುದಕ್ಕೆ ನಾವು ಅವಕಾಶವನ್ನು ಒದಗಿಸುತ್ತಿದ್ದೇವೆ.” ಅಪರ್ಣಾ ಕೇಳ್ಕರ್ ಹೇಳುವಂತೆ ಪಂಡಿತ್ ಸಿ.ಆರ್.ವ್ಯಾಸ್ ಅವರ ಬಂದಿಶ್‌ಗಳು ಅತ್ಯುನ್ನತ ಪ್ರಸ್ತುತಿಗಳಾಗಿವೆ. ಈ ಸ್ಫರ್ಧೆಯಲ್ಲಿ ನಾವು ಅವರ ಪರಂಪರೆಯನ್ನು ಗೌರವಿಸುವುದರ ಜೊತೆಗೆ, ಯುವ ಶಾಸ್ತ್ರೀಯ ಸಂಗೀತಗಾರರಿಗೆ ನಮ್ಮ ಪರಂಪರೆಯನ್ನು ಅನ್ವೇಷಿಸಲು ಮತ್ತು ಸಂರಕ್ಷಿಸಲು ಪ್ರೋತ್ಸಾಹ ನೀಡುತ್ತಿದ್ದೇವೆ.

ಪಂಡಿತ್ ಸಿ.ಆರ್. ವ್ಯಾಸ್ ಅವರ ಬಗ್ಗೆ: ಸಂಗೀತ ವಲಯದಲ್ಲಿ “ಗುಣಿಜಾನ್” ಎಂದೇ ಹೆಸರಾದ ಪಂಡಿತ್ ಸಿ.ಆರ್.ವ್ಯಾಸ್‌ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅತ್ಯಂತ ಧೀಮಂತ ಪ್ರತಿಭೆಯಾಗಿದ್ದರು. ಅವರ ವಿಶಿಷ್ಟ ಪ್ರಸ್ತಾನ ಮತ್ತು ಭಾವನಾತ್ಮಕ ಪ್ರಸ್ತುತಿಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರು ಸುಮಾರು 200 ಕ್ಕೂ ಹೆಚ್ಚು ಬಂದಿಷ್‌ಗಳನ್ನು ಸಂಯೋಜನೆ ಮಾಡಿದ್ದಾರೆ. ಸಂಗೀತಕ್ಕೆ ಅವರು ನೀಡಿದ ಕೊಡುಗೆಗೆ ಅಪಾರ ಮನ್ನಣೆ ವ್ಯಕ್ತವಾಗಿದ್ದು, ಪದ್ಮಭೂಷಣ ಪ್ರಶಸ್ತಿಯೂ ಸಂದಿದೆ.

ಗ್ರೇಸ್ ಫೌಂಡೇಶನ್‌ ಬಗ್ಗೆ: ಗುಂಜಾನ್ ರಿಸರ್ಚ್‌ ಆರ್ಟ್‌ ಕಲ್ಚರ್ ಆಂಡ್ ಎಜುಕೇಶನ್ (ಗ್ರೇಸ್) ಫೌಂಡೇಶನ್‌ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿಸುವುದಕ್ಕೆ ಮತ್ತು ಪ್ರತಿಭಾವಂತರನ್ನು ಪೋಷಿಸುವುದಕ್ಕೆ ಹೆಸರಾಗಿದೆ. ಹಲವು ಉಪಕ್ರಮಗಳು ಮತ್ತು ಕಾರ್ಯಕ್ರಮಗಳ ಮೂಲಕ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸುವ ಮತ್ತು ರಕ್ಷಿಸುವುದಕ್ಕೆ ಫೌಂಡೇಶನ್ ಬದ್ಧವಾಗಿದೆ.

ಆಸಕ್ತ ಅಭ್ಯರ್ಥಿಗಳು ಇನ್ನಷ್ಟು ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಸ್ಫರ್ಧೆಗೆ ನೋಂದಣಿ ಮಾಡಲು ಜು.15 ಕೊನೆಯ ದಿನವಾಗಿದೆ. https://www.gunijaanbandish.in. ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: 8484012431.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.