



.
ಹೆಬ್ರಿ: ಅಮೃತ ಭಾರತಿ ಮಾತೃಮಂಡಳಿಯ ವತಿಯಿಂದ ಸಂಸ್ಥೆಯ ಪೋಷಕರಿಗೆ, ಗ್ರಾಮ ಪಂಚಾಯತ್ ನಿಂದ ಸಿಗುವ ಸರಕಾರದ ಸವಲತ್ತು ಹಾಗೂ ಅನುದಾನಗಳ ಬಗ್ಗೆ ಮಾಹಿತಿ ಕಾಯಾ೯ಗಾರ ಸೋಮವಾರ ಅಮೃತ ಭಾರತಿ ಅನ್ನಪೂಣಾ೯ ಸಭಾಂಗಣದಲ್ಲಿ ನಡೆಯಿತು.
ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಗ್ರಾಮಸ್ಥರಿಗೆ ಸರ್ವ ರೀತಿಯಲ್ಲಿ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಗ್ರಾಮ ಪಂಚಾಯತ್ ಮೂಲಕ ನೀಡಲು ಬದ್ದ. ಈ ಬಗ್ಗೆ ಪಂಚಾಯತ್ ಕಛೇರಿ ತಮ್ಮ ಸೇವೆಗೆ ಸದಾ ನಿಮ್ಮೊಂದಿಗೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಹೆಬ್ರಿ ಗ್ರಾಮ ಪಂಚಾಯತಿನ ಪಿ.ಡಿ.ಓ. ಸದಾಶಿವ ಸೇವೆ೯ಗಾರ ಮಾಹಿತಿ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಉದ್ಯಮಿ ಗುರುದಾಸ್ ಶೆಣೈ ಗ್ರಾಮವಿಕಾಸದ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟಿನ ಸದಸ್ಯೆ ಡಾ. ಭಾಗ೯ವಿ ಆರ್ ಐತಾಳ್ ಪ್ರಸ್ತಾವಿಸಿದರು. ಶಾಲಾ ಮುಖ್ಯಶಿಕ್ಷಕರಾದ ಅರುಣ್, ಅನಿತಾ, ಅಪಣಾ೯ ಆಚಾರ್ಯ, ಮಾತೃಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್, ನಿರ್ದೇಶಕಿ ವಿಮಲಾ, ವಿದ್ಯಾಭಾರತಿ ಕಾಯ೯ದಶಿ೯ ಶಿಕ್ಷಕ ಮಹೇಶ್ ಹೈಕಾಡಿ ಉಪಸ್ಥಿತರಿದ್ದರು.
ವೀಣಾ ಆರ್ ಭಟ್ ಸ್ವಾಗತಿಸಿದರು, ಕೋಶಾಧಿಕಾರಿ ಛಾಯಾ ಸೋಮಯಾಜಿ ವಂದಿಸಿದರು.
ಸುಮಾರು 60 ಜನ ಪೋಷಕರು ಇದರ ಪ್ರಯೋಜನ ಪಡೆದು ಕೊಂಡರು.
ಸಂಸ್ಥೆಯ ಶಿಕ್ಷಕವೃಂದ ಹಾಗೂ ವಸಂತಿ ಹೆಬ್ಬಾರ್ ಕಬ್ಬಿನಾಲೆ ಸೇರಿದಂತೆ ಎಲ್ಲಾ ಮಾತೆಯರು ಉಪಸ್ಥಿತಿತರಿದ್ದು ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.