logo
WhatsApp Image 2026-04-02 at 14.46.04.jpeg
hindalco everlast.jpeg

ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಹಸಿರು ಬಣ್ಣದ ದಿನ ಹಾಗೂ ತರಕಾರಿ ದಿನಾಚರಣೆ ಕಾರ್ಯಕ್ರಮ

ಟ್ರೆಂಡಿಂಗ್
share whatsappshare facebookshare telegram
31 Aug 2026
post image

ನಡೂರು: ಗ್ರ್ಯಾವಿಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗಾಗಿ ಹಸಿರು ಬಣ್ಣದ ದಿನ ಹಾಗೂ ತರಕಾರಿ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳಿಗೆ ಹಸಿರು ಬಣ್ಣವನ್ನು ಗುರುತಿಸುವಂತೆ ಮಾಡುವುದು ಹಾಗೂ ವಿವಿಧ ತರಕಾರಿಗಳ ಪರಿಚಯ ಮತ್ತು ಅವುಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಕ್ಕಳು ಹಸಿರು ಬಣ್ಣದ ವಸ್ತುಗಳು ಹಾಗೂ ವಿವಿಧ ತರಕಾರಿಗಳನ್ನು ತಂದು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಕಾರ್ಯಕ್ರಮದ ಅಂಗವಾಗಿ ಶಾಲೆಯ ತರಗತಿ ಕೊಠಡಿಯನ್ನು ಸಂಪೂರ್ಣವಾಗಿ ಹಸಿರು ಬಣ್ಣದ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಹಸಿರು ಬಣ್ಣದ ಅಲಂಕಾರಗಳು ಹಾಗೂ ತರಕಾರಿಗಳ ಪ್ರದರ್ಶನದಿಂದ ತರಗತಿಯ ವಾತಾವರಣವು ಆಕರ್ಷಕವಾಗಿ ಕಂಗೊಳಿಸುತ್ತಿದ್ದು, ಮಕ್ಕಳಿಗೆ ದಿನವು ಇನ್ನಷ್ಟು ಬಣ್ಣಬಣ್ಣದ ಹಾಗೂ ಸಂತಸದಾಯಕ ಅನುಭವವನ್ನು ನೀಡಿತು.

ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸರಸ್ವತಿ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಕಿಯರು ಉಪಸ್ಥಿತರಿದ್ದು, ಮಕ್ಕಳಿಗೆ ಹಸಿರು ಬಣ್ಣ ಮತ್ತು ತರಕಾರಿಗಳ ಕುರಿತು ತಿಳಿಸಿಕೊಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.