



ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಾಗ್ಗೆ ಟ್ರೋಲ್‌ಗೆ ಗುರಿಯಾಗುತ್ತಿರುತ್ತಾರೆ. ಅದೂ ಜಿಎಸ್ ಟಿ ಕಾರಣಕ್ಕೆ ಅವರು ಟ್ರೋಲ್ ಆಗೋದೇ ಜಾಸ್ತಿ. ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಜಿಎಸ್‌ಡಿ ಮಂಡಳಿ ಸಭೆಯಲ್ಲಿ ಪಾಪ್‌ಕಾರ್ನ್‌ಗೂ ಕೂಡಾ ಮೂರು ರೀತಿಯಲ್ಲಿ ತೆರಿಗೆ ವಿಧಿಸಲು ಶಿಫಾರಸು ಮಾಡಲಾಗಿದ್ದು,
ಈಗ ಇನ್ಫುಯೆನ್ಸರ್ ಒಬ್ರು ಕೂಡಾ ಅಂಗಾಂಗ ದಾನಕ್ಕೂ ಜಿಎಸ್‌ಟಿ, ಕಿಡ್ನಿ ಫೈಲ್ಯೂರ್ ಬಳಿಕ ಕಿಡ್ನಿ ಕಸಿ ಮಾಡಿದ್ರೆ ಆ ಜೀವಿತಾವಧಿಯೂ ಜಿಎಸ್‌ಟಿ ಅಡಿಯಲ್ಲಿ ಬರುತ್ತೆ ಎಂದು ತಮಾಷೆಯಾಗಿ ಹೇಳುವ ಮೂಲಕ ನಿರ್ಮಲಾ ಸೀತಾರಾಮನ್ ಅವನ್ನು ಸಖತ್ ಆಗಿ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು ವಿತ್ತಸಚಿವೆಯನ್ನು ಜಿಎಸ್ ಟಿ ಕಾರಣಕ್ಕೆ ನೆಟ್ಟಿಗರು ಹಿಗ್ಗಾಮಗ್ಗಾ ಜಾಡಿಸಿದ್ದಾರೆ.
“ಜಿಎಸ್‌ಟಿ ಕೌನ್ಸಿಲ್ ಅಂಗಾಂಗ ದಾನವನ್ನೂ ಜಿಎಸ್‌ಟಿ ವ್ಯಾಪ್ತಿಯಲ್ಲಿ ಸೇರಿಸಲು ನಿರ್ಧರಿಸಿದೆ. ಇನ್ನು ಮುಂದೆ ಯಾರಾದರೂ ಅಂಗಾಂಗ ದಾನ ಮಾಡಿದರೆ ಅಥವಾ ಸ್ವೀಕರಿಸಿದೆ ಆ ಶಸ್ತ್ರಚಿಕಿತ್ಸೆಗೆ 18% ಜಿಎಸ್‌ಟಿ ತೆರಿಗೆ ವಿಧಿಸಲಾಗುವುದು. ಒಂದು ವೇಳೆ ಮೂತ್ರಪಿಂಡದ ವೈಫಲ್ಯವಾಗಿ ಕಿಡ್ನಿ ಕಸಿ ಮಾಡಿಸಿಕೊಂಡರೆ ಆ ಜೀವಿತಾವಧಿ ವಿಸ್ತರಿಸಿದ ಲೆಕ್ಕದಲ್ಲಿ ನಿಮ್ಮ ಜೀವಿತಾವಧಿಯೂ ಜಿಎಸ್‌ಟಿ ಅಡಿಯಲ್ಲಿ ಬರುತ್ತದೆ. ಇನ್ನೂ ಕಾರ್ನಿಯಾ ದಾನ, ರಕ್ತದಾನಕ್ಕೂ ಜಿಎಸ್‌ಟಿ ಅನ್ವಯವಾಗಲಿದೆ” ಎಂದು ಹೇಳುತ್ತಾ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆಯನ್ನು ಟ್ರೋಲ್ ಮಾಡಿದ್ದಾರೆ. ಮುಂಬೈ ಮೂಲದ ಕಂಟೆಂಟ್ ಕ್ರಿಯೆಟರ್ ರಾಧ ಎನ್ನುವವರೇ ಸಚಿವೆಯನ್ನು ಟ್ರೋಲ್ ಮಾಡಿದವರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.