



ಕಾಪು: ಕಾಪು ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರು ಚುನಾಯಿತರಾದರೆ ಕಾಪು ಕ್ಷೇತ್ರದಲ್ಲಿ ಸುಸಜ್ಜಿತ ಗೋ ರುದ್ರಭೂಮಿ ಸ್ಥಾಪಿಸುವುದಾಗಿ ಅವರು ಮತದಾರರಿಗೆ ಭರವಸೆಯನ್ನು ನೀಡಿದ್ದಾರೆ. ಗೋ ಪ್ರೇಮಿ ಆಗಿರುವ ಗುರ್ಮೆ ಸುರೇಶ್ ಶೆಟ್ಟಿ ಈಗಾಗಲೇ ಗೋ ವಿಹಾರಧಾಮ ಸ್ಥಾಪಿಸಿ ನೂರಾರು ಗೋವುಗಳನ್ನು ಸಾಕುತ್ತಿದ್ದಾರೆ. ಅವರೀಗ ತಮ್ಮ ಪ್ರಣಾಳಿಕೆಯಲ್ಲಿ ಗೋವುಗಳಿಗೆ ಗೌರವಯುತ ಅಂತ್ಯಸಂಸ್ಕಾರಕ್ಕಾಗಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಮಾಡುವುದಾಗಿ ವಚನ ನೀಡಿದ್ದಾರೆ. ಇದಕ್ಕೆ ತಮಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಪ್ರೇರಣೆಯಾಗಿದ್ದಾರೆ ಹಾಗೂ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕದ ಮೊದಲ ಗೋ ರುದ್ರ ಭೂಮಿ ನಿರ್ಮಾಣವಾಗಲಿದೆ ಎಂದು ಹೇಳಿರುವ ಅವರು ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ನೀಡಲಾಗಿರುವ ಉನ್ನತ ಮತ್ತು ಪೂಜ್ಯ ಸ್ಥಾನಮಾನವನ್ನು ಅನುಸರಿಸಿ ತಾವು ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.