



ಮಂಗಳೂರು: ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಫ್ರಾನ್ಸಿಸ್ ಸೆರಾವೊರವರು, ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಆರು ಉಪಯಾಜಕರುಗಳಿಗೆ ಯಾಜಕ ದೀಕ್ಷೆ ನೀಡಿದರು. ಯಾಜಕ ದೀಕ್ಷೆಯನ್ನು ಪಡೆದ ನವಯಾಜಕರು: ಆಶ್ವಿನ್ ಡಿ’ಸಿಲ್ವಾ ಮೂಡಬಿದ್ರೆಯ ಸಂಪಿಗೆ, ವಿಶಾಲ್ ಪಿಂಟೋ ಕಿನ್ನಿಗೋಳಿ, ಜೈಸನ್ ಲೋಬೊ ಸಿದ್ದಕಟ್ಟೆ, ವಿನೋದ್ ಸಲ್ಡಾನ್ಹಾ ವಿರಾಜ್‍ಪೇಟೆ, ಆರ್ವಿನ್ ಪಾಯ್ಸ್ ಮಡಂತ್ಯಾರು ಮತ್ತು ಲೆಸ್ಟನ್ ಲೋಬೊ ಮೂಡುಬೆಳ್ಳೆತಮ್ಮ ಪ್ರಭೊಧನೆಯಲ್ಲಿ ಕ್ರಿಸ್ತನನ್ನು ತಮ್ಮ ಜೀವನದಲ್ಲಿ ಪ್ರತಿಬಿಂಬಿಸಲು ಕರೆನೀಡಿದರು. ಕ್ರಿಸ್ತನು ತನ್ನ ಶಿಷ್ಯರ ಪಾದಗಳನ್ನು ತೊಳೆಯುವುದರ ಮೂಲಕ ಸೇವೆಯ ಮನೋಭಾವನೆಯನ್ನು ಬೋಧಿಸಿದರು. ಕ್ರಿಸ್ತ ಯೇಸು ಕಲಿಸಿದ ಬೋಧನೆಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿ ಕ್ರಿಸ್ತನನ್ನು ಪ್ರತಿಭಿಂಬಿಸಬೇಕೆಂದು ಕರೆನೀಡಿದರು. ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ವಂದನೀಯ ಸ್ವಾಮಿ ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ ಮುಖ್ಯಗುರುಗಳಾದ ವಂದನೀಯ ಸ್ವಾಮಿ ಅನಿಲ್ ಡಿ’ಮೆಲ್ಲೊ ಹಾಗೂ ನೂರಕ್ಕೂ ಹೆಚ್ಚು ಗುರುಗಳು ಹಾಜರಿದ್ದರು. ವಂದನೀಯ ಸ್ವಾಮಿ ವಿಲಿಯಂ ಮಾರ್ಸೆಲ್‍ರವರು ಬಲಿಪೂಜೆಯ ನಿರ್ವಹಣೆಯನ್ನು ನೋಡಿಕೊಂಡರು. ವಂದನೀಯ ಸ್ವಾಮಿ ಆನುಶ್ ಡಿ’ಕುನ್ಹಾರವರು ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನೋಡಿಕೊಂಡರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.