



ನಿಯಮ ಮಾರ್ಪಾಡು .ಟಫ್ ಆಗಿರಲಿದೆ ಪರೀಕ್ಷೆ ಬೆಂಗಳೂರು: ಎಸ್ ಎಲ್ ಸಿ ಪರೀಕ್ಷೆಯ ನಿಯಮ ಮಾರ್ಪಾಡು ಮಾಡಲಾಗಿದೆ.ಕೊರೋನ ಹಿನ್ನೆಲೆಯಲ್ಲಿ ನೀಡಲಾಗಿದ್ದ ವಿನಾಯಿತಿ ಸರಕಾರ ತಿಲಾಂಜಲಿ ಇಟ್ಟಿದೆ . ಅದರಂತೆ ಈ ಬಾರಿ ಸುಲಭ ಪ್ರಶ್ನೆ ಶೇ.30, ಸಾಧಾರಣ ಪ್ರಶ್ನೆ ಶೇ.50, ಕಠಿಣ ಪ್ರಶ್ನೆ ಶೇ.20 ಸೇರಿದಂತೆ ಒಟ್ಟು 100 ಅಂಕಗಳಿಗೆ ಸರಿಸಮವಾಗಿ ಪ್ರಶ್ನೆ ಪತ್ರಿಕೆ ರೂಪಿಸಿದೆ. ಕಳೆದ ಎರಡು ವರ್ಷ ಕೊರೋನಾ ಕಾರಣಕ್ಕೆ ಸರಳವಾದ ಪ್ರಶ್ನೆ ಪತ್ರಿಕೆ ಜತೆಗೆ ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ನೀಡಿತ್ತು. ಆದ್ರೇ ಮುಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ರೀತಿ ಪ್ರಶ್ನೆ ಪತ್ರಿಕೆ ಸುಲಭವಾಗಿರುವುದಿಲ್ಲ. ಅಲ್ಲದೇ ಕಳೆದ 2 ವರ್ಷ ಶೇ.75 ಹಾಜರಾತಿಗೆ ನೀಡಿದ್ದ ವಿನಾಯತಿಯನ್ನು ಮುಂದಿನ ಪರೀಕ್ಷೆಗೆ ರದ್ದು ಮಾಡಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.