



ಕಾರ್ಕಳ: ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ಹಸ್ತಾಂತರ ಮಾಡಿರುವುದು ಪದ್ಮಗೋಪಾಲ್ ಟ್ರಸ್ಟ್ ಸೇವೆ ಶ್ಲಾಘನೀಯ ವಾಗಿದೆ ಎಂದು ಕಾರ್ಕಳ ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಸಿ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಶುಕ್ರವಾರ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಅಜೆಕಾರು ಪದ್ಯಗೋಪಾಲ ಎಜ್ಯುಕೇಶನ್ ಟ್ರಸ್ಟ್ (ರಿ) ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು, ಗಣಿತನಗರ, ಕಾರ್ಕಳ ಇದರ ವತಿಯಿಂದ ನೀಡಿದ ನೂತನ ಬೊಲೆರೊ ವಾಹನದ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೊರೋನ ಸಂದಿಗ್ಧ ಕಾಲಘಟ್ಟ ಸಂದರ್ಭದಲ್ಲಿ ಅಜೆಕಾರು ಪದ್ಮಗೋಪಾಲ್ ಟ್ರಸ್ಟ್ ಹೆಗಲು ಕೊಟ್ಟು ಆರೋಗ್ಯ ಇಲಾಖೆ ಜೊತೆ ಶ್ರಮಿಸುವಲ್ಲಿ ಅವರ ಸೇವೆ ಅಭಿನಂದನೀಯವಾಗಿದೆ ಎಂದರು .ಅಧಿಕಾರಿ ಗಳ ಮಟ್ಟದಲ್ಲಿ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವಲ್ಲಿ ಸರಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ನಮ್ಮ ಪ್ರಯತ್ನ ಸದಾ ನಿಮ್ಮಜೊತೆಗಿದೆ ಎಂದರು.
ಪ್ರಸ್ತಾವಿಕ ಮಾತನಾಡಿ ದ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ (ರಿ) ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ ಎರಡು ಎಕರೆ ವಿಶಾಲವಾದ ಪ್ರದೇಶದಲ್ಲಿ ರುವ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ಉನ್ನತದರ್ಜೆಗೇರಬೇಕು ಎನ್ನುವುದು ಮಹದಾಸೆಯಾಗಿದೆ , ಅದಕ್ಕಾಗಿ ಊರಿನ ದಾನಿಗಳು ಎಲ್ಲರೂ ಒಂದಾಗಿ ಶ್ರಮಿಸುವಂತೆ ಕರೆನೀಡಿದರು. ಇದೇ ಸಂದರ್ಭದಲ್ಲಿ ಡಾ. ಸಂತೋಷ ಕುಮಾರ್ ಶೆಟ್ಟಿ ಯವರ ಸೇವೆಯನ್ನು ನೆನಪಿಸಿಕೊಂಡರು. ಸಭೆಯಲ್ಲಿ ಡಾ. ಕಾರ್ತಿಕೇಶ್ , ಡಾ ಸೌಮ್ಯ , ಡಾ. ಜಯಕರ ಶೆಟ್ಟಿ ,ಡಾ. ರಾಮಚಂದ್ರ ಜೋಷಿ , ಡಾ ಪ್ರಸನ್ನ ಹೆಗ್ಡೆ , ಡಾ. ಚಂದ್ರಿಕಾ ಕಿಣಿ , ಡಾ. ವೀಣಾ, ಡಾ ಅನಿತಾ ಪ್ರಭು. ಡಾ. ಸಂದೀಪ್ ಕುಡ್ವ , ಡಾ. ಪ್ರಸನ್ನ ಹೆಗ್ಡೆ , ಡಾ . ಸುನೀಲ್ ಕಿಣಿ , ಡಾ. ಪ್ರಮೋದ್ ,ಡಾ . ಶ್ರೇಯಸ್ ನಾಯಕ್, ಡಾ. ನಿಖಿನ್ ಉಪಸ್ಥಿತರಿದ್ದರು .
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅನುಷಾ ಶೆಟ್ಟಿ ಸ್ವಾಗತಿಸಿದರು. ಜಲಜ ಪ್ರಾರ್ಥಿಸಿ ದರು.ಸಂಗೀತ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸೌಮ್ಯ ಧನ್ಯವಾದ ವಿತ್ತರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.