



ಕಾರ್ಕಳ ೬: ಜೀವನದಲ್ಲಿ ಸಂತೋಷ, ಆನಂದ ಇವುಗಳು ಕೇವಲ ಸಂಪತ್ತು, ವೈಭವ, ಅಧಿಕಾರಗಳಿಂದ ಬರುವುದಲ್ಲ. ಎಂದು ವಿಶ್ರಾಂತ ಪ್ರಾಧ್ಯಾಪಕ , ಚಿಂತಕ ಡಾ. ಹಯವದನ ಉಪಾಧ್ಯ ಅವರು ಹೇಳಿದರು ಭುವನೇಂದ್ರ ಕಾಲೇಜಿನಲ್ಲಿ ಸಾಹಿತ್ಯ ಸಂಘದ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಜೀವನವನ್ನು ತಿಳುವಳಿಕೆಯಿಂದ ನಿಭಾಯಿಸಿದರೆ, ದು:ಖ, ದುರಿತಗಳಿಂದ ಪಾರಾಗಿ ಆನಂದವನ್ನು ಪಡೆಯಬಹುದು. ಭಗವಾನ್ ಬುದ್ಧನು ದು:ಖಕ್ಕೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಮೊದಲಿಗನಾಗುತ್ತಾನೆ ಅವನ ಹುಡುಕಾಟ ಕಷ್ಟಗಳಿಂದ ಪಾರಾಗುವುದಾಗಿತ್ತು. ಭಗವಾನ್ ಬುದ್ಧನಿಗಿಂತ ಮೊದಲೆ ಪುರಾತನ ಮುನಿಗಳು ಓಂ, ಶೂನ್ಯ ಮುಂತಾದುವುಗಳ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆಸಿ ಆನಂದಾನುಭೂತಿಯನ್ನು ಕಂಡುಕೊAಡವರು. ಆ ಪರಂಪರೆ ಬಸವಣ್ಣ, ಸೂಫಿ ಸಂತರು, ಶ್ರೀರಮಣಮಹರ್ಷಿ, ಶ್ರೀ ಅರಬಿಂದೊ, ಪರಮಹಂಸ , ಜಿಡ್ಡು ಕೃಷ್ಣಮೂರ್ತಿ ಮುಂತಾದವರು ಮತ್ತೆ ಮತ್ತೆ ಸರಳ ರೀತಿಯಲ್ಲಿ ಜಗತ್ತಿಗೆ ವಿವರಿಸುತ್ತಲೇ ಬಂದರು. ಇದು ಆಧ್ಯಾತ್ಮದ ಚಿಂತನೆ ಮಾತ್ರವಲ್ಲದೆ ಸರಳರೀತಿಯ ಬದುಕಲ್ಲಿ ತನ್ನ ಬಗೆಗಿನ ತಿಳುವಳಿಕೆಯ ವಿಸ್ತಾರವೂ ಕೂಡ ಆನಂದಾನುಭೂತಿಯನ್ನು ಕಂಡುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ ಎಂದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಮಾತನಾಡಿʼ ಅರಿವಿನ ತಿಳುವಳಿಕೆ ಮಾನವನಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆಯಲು ಸಾಧ್ಯವೆಂದರು. ವಿಸ್ತಾರವಾದ ಓದು ಅದಕ್ಕೆ ಸಹಕಾರಿ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಸ್ವಾಗತಿಸಿ, ಪ್ರಸ್ತಾವನೆಯ ಮಾತುಗಳನ್ನಾಡಿದರು. ಸಾಹಿತ್ಯ ಸಂಘದ ಸಂಯೋಜಕ ಡಾ. ಅರುಣಕುಮಾರ ಎಸ್. ಆರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಕಾರ್ಯದರ್ಶಿ ಶ್ವೇತಾ ಜೈನ್ ವಂದಿಸಿದರು .ಮಲ್ಲಿಕಾರ್ಜುನ ಕಾರ್ಯಕ್ರಮ ನಿರ್ವಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.