



ಸುರಕ್ಷಾ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ - ಸುಖಗಳು ಇದ್ದೆ ಇರುತ್ತದೆ. ಇವುಗಳು ಎರಡು ಒಂದು ನಾಣ್ಯದ ಮುಖಗಳಿದ್ದಂತೆ. ಜೀವನದಲ್ಲಿ ಅಸೆ, ನೋವು, ನಲಿವು ಮತ್ತು ನೆನಪುಗಳು ಒಂದರ ಹಿಂದೆ ಒಂದರಂತೆ ಬಂದು ಕಣ್ಣಿನ ಸ್ಮೃತಿ ಪಟಲದಲ್ಲಿ ದರ್ಶನವಾಗಿ ಮಾಯವಾಗುತ್ತದೆ. . ಭಾವಗಳು ಎದುರಾದಾಗ ನಾವು ಊಹಿಸಿಕೊಂಡಂತೆ ಬರುವುದಿಲ್ಲ .ಒಮ್ಮೊಮ್ಮೆ ಯಾವುದೇ ತೊಂದರೆ ಇಲ್ಲದೆ ಬಂದು ಹೋಗುತ್ತದೆ. ಇನ್ನು ಕೆಲವೊಮ್ಮೆ ತೊಂದರೆಯನ್ನು ಮಾಡಿ ಹೋಗುತ್ತದೆ.
ನಮ್ಮ ಜೀವನದಲ್ಲಿ ಮುಂದೆ ಸಾಗಲು ನಾವು ಏನು ಮಾಡಿದರು ನಮ್ಮ ಜೀವನ ಮತ್ತಷ್ಟು ಅಧಿಕ ಪ್ರಮಾಣದಲ್ಲಿ ಶ್ರಮ ಮತ್ತು ಸಾಮರ್ಥ್ಯವನ್ನು ಹಾಕುವಂತೆ ಮಾಡುತ್ತದೆ. ನಿನ್ನ ಜೀವನದಲ್ಲಿ ನಿನ್ನ ಉದ್ದೇಶ ಏನು ಎಂದು ಕೇಳಿದಾಗ ನಾವು ಹಲವಾರು ರೀತಿಯಲ್ಲಿ ಉತ್ತರವನ್ನು ನೀಡುತ್ತೇವೆ. ಆದರೆ ಕೊನೆಗೆ ನಮಗೆ ಸಿಗುವ ಉತ್ತರ ಸುಖ ಅಥವಾ ಸಂತೋಷವೇ ಆಗಿರುತ್ತದೆ.
ಎಲ್ಲಾ ಧರ್ಮವು ಯಾರಿಗೂ ಯಾವ ನೋವನ್ನು ನೀಡದೆ ಎಲ್ಲರೂ ಸುಖ ಸಂತೋಷದಿಂದ ಇರಬೇಕು ಎಂಬುವುದನ್ನು ತಿಳಿಸುತ್ತದೆ. ಯಾರಾದರೂ ನಮ್ಮಲ್ಲಿ ಸುಖ ಸಂತೋಷ ಎಂದರೆ ಏನು ಎಂದು ಕೇಳಿದ್ದಾಗ ನಮ್ಮಲ್ಲಿ ಯಾವ ಉತ್ತರವು ಇರುವುದಿಲ್ಲ. ನಾವು ಹೆಚ್ಚು ಹಣವಿದ್ದವರು ಹೆಚ್ಚು ಸುಖ ಸಂತೋಷದಿಂದ ಇರುತ್ತಾರೆ ಎಂದು ನಂಬುತ್ತೇವೆ. ಆದರೆ ಅವರಿಗಿಂತ ಬಡವರಾಗಿರುವವರೇ ಒಳ್ಳೆಯ ಸಂತೋಷ ಮಯ ಜೀವನವನ್ನು ನಡೆಸುತ್ತಿರುತ್ತಾರೆ. ಕಷ್ಟ ಬಂದಾಗ ಹೆದರದೆ ಅದನ್ನು ಎದುರಿಸಿ ಸುಖದದತ್ತ ಸಾಗುವ ಮಾರ್ಗವನ್ನು ನಾವು ಕಂಡುಕೊಳ್ಳಬೇಕು. ಆದಷ್ಟು ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಬೇಕು. ಆಗ ಜೀವನ ಸುಂದರ ಮತ್ತು ಸುಖಮಯವಾಗಿರುತ್ತದೆ.
ಏನೇ ಕಷ್ಟ ಬಂದರು ಅದನ್ನು ನಗುನಗುತ್ತಾ ಸ್ವೀಕರಿಸಿ ಮುಂದೆ ಸಾಗುವುದು ಜೀವನದಲ್ಲಿ ನಾವು ಕಲಿಯಬೇಕಾದ ಬಹುದೊಡ್ಡ ಪಾಠವಾಗಿದೆ. ಕಷ್ಟದಲ್ಲಿ ಇರುವಾಗ ನಗುತ್ತಾ ಇರುವುದು ಕಷ್ಟದ ಕೆಲಸ. ಆದರೂ ನಾವು ನಗುತ್ತಾ ಇರುವುದರಿಂದ ಆ ಕಷ್ಟವನ್ನು ಮರೆಯಲು ಸಹಾಯವಾಗುತ್ತದೆ. ನಗು ನಿಮ್ಮನ್ನು ಮತ್ತು ನಿಮ್ಮ ಜೊತೆಯಲ್ಲಿ ಇರುವವರನ್ನು ನಗುನಗುತ್ತಾ ಇರುವಂತೆ ಮಾಡುತ್ತದೆ. ಕಷ್ಟವನ್ನು ಬದಿಗೊತ್ತಿ ನಗುತ್ತಾ ಇರುವುದನ್ನು ನಾವು ಕಲಿತುಕೊಂಡರೆ ನೆಮ್ಮದಿಯನ್ನು ನೀಡಿ ಕಷ್ಟವನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ.
ನಿಮ್ಮ ಒಬ್ಬರ ನಗು ನಿಮ್ಮ ಸುತ್ತ - ಮುತ್ತ ಇರುವವರನ್ನು ನಗುನಗುತ್ತಾ ಇರುವಂತೆ ಮಾಡಬಹುದು. ನಿಮ್ಮ ನಗಿಸುವ ಗುಣ ಬೇಸರದ ಮುಖ ಹೊತ್ತುಕೊಂದಿರುವವರನ್ನು ನಗಿಸುತ್ತದೆ. ಹಾಗಾಗಿ ಯಾರನ್ನಾದರೂ ನಗಿಸಲು ಮತ್ತು ನೀವು ನಗಲು ಕಡೆಗಣಿಸಬೇಡಿ. ನೀವು ಇನ್ನೊಬ್ಬರನ್ನು ನಗಿಸುವಲ್ಲಿ ಉತ್ತಿರ್ಣರಾದರೆ. ಅದು ನಿಮ್ಮ ಸುಖ - ಸಂತೋಷವನ್ನು ಹೆಚ್ಚಿಸುತ್ತದೆ.
ನಗುನಗುತ್ತಾ ಇರುವುದರಿಂದ ನಕರಾತ್ಮಕ ಗುಣವನ್ನು ಹೋಗಲಾಡಿಸಿ ಸಕರಾತ್ಮಕ ಗುಣವನ್ನು ಮೂಡಿಸುವಲ್ಲಿ ಸಹಾಯಕವಾಗುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.