



ಉಡುಪಿ: ಚಂಡಮಾರುತದ ಪ್ರಭಾವದಿಂದ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದ್ದರ ಪರಿಣಾಮ ಉಡುಪಿ ಜಿಲ್ಲೆಯಲ್ಲಿ ಮೂರುಗಂಟೆಗಳ ಕಾಲ ಭಾರಿ ಮಳೆ ಸುರಿಯುತ್ತಿದೆ ಇದರ ನಡುವೆ ಮಣಿಪಾಲ ಈಶ್ವರ ನಗರದಿಂದ ಪರ್ಕಳ ಅತ್ರಾಡಿ ವರೆಗಿನ ರಸ್ತೆಯ ಮೇಲೆ ನೀರು ಸಾಗುತ್ತಿದ್ದರ ಪರಿಣಾಮ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೂರು ಟ್ರಾಫಿಕ್ ಜಾಮ್ ಉಂಟಾಗಿದೆ.. ಅಸಮರ್ಪಕ ರಸ್ತೆ ಕಾಮಗಾರಿ: ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಯ ಪರ್ಕಳ ಪೇಟೆಯಲ್ಲಿ ಕೆಸರಿನಿಂದ ಹೋಗಲಾಗದೆ ವಾಹನ ಸವಾರರು ಹಾಗು ವಾಹನ ಚಾಲಕರು ತೊಂದರೆ ಅನುಭವಿಸುತಿದ್ದದ್ದು ಕಂಡು ಬಂತು.
ಬೆಳಗ್ಗೆ ಹೆದ್ದಾರಿಗೆ ತೆಪೆ ಕಾರ್ಯ ಸಂಜೆ ಹೊತ್ತು ರಸ್ತೆ ಯೆ ಮಾಯ :
ಹೆದ್ದಾರಿಯಲ್ಲಿ ಹೊಂಡ ಗುಂಡಿಗಳಿಂದ ಸವಾರರು ತೊಂದರೆ ಅನುಭವಿಸುತಿದ್ದರು ಸರಿಪಡಿಸದ ರಸ್ತೆಗೆ ಸವಾರರು ಹಾಗು ಸಾರ್ವಜನಿಕ ರಿಂದ ಆಕ್ರೋಶ ವ್ಯಕ್ತವಾಗಿತ್ತು .ಅದಕ್ಕಾಗಿ ಜಿಲ್ಲಾಡಳಿತ ಡಾಮರ್ ತೇಪೆ ಕಾರ್ಯ ಮಾಡಿದ್ದರು ,ಆದರೆ ಭಾರಿ ಮಳೆಯಿಂದ ಈಶ್ವರ ನಗರದಿಂದ ಪರ್ಕಳ ರಸ್ತೆಯಲ್ಲಿ ಹಾಕಲಾಗಿದ್ದ ಡಾಮರ್ ಕಿತ್ತು ಹೋಗಿ ರಸ್ತೆಯೆ ಮಾಯವಾಗಿದೆ. ಕಲ್ಲುಗಳು ಮೇಲ್ಭಾಗಕ್ಕೆ ಬಿದ್ದಿವೆ ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದ ಘಟನೆಗಳು ನಡೆಯಿತು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.