



ಅಪಾಯ ಮಟ್ಟದಲ್ಲಿ ಹರಿಯುತ್ತಿದೆ ಸ್ವರ್ಣ : ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತಿದ್ದು ಸ್ವರ್ಣ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿದೆ. ಮುಂಡ್ಲಿ ಅಣೆಕಟ್ಟಿನ ನ ಎಲ್ಲಾ ಗೇಟ್ ಗಳನ್ನು ತೆರೆಯಲಾಗಿದ್ದು ಮುಂಡ್ಲಿ ಅಣೆಕಟ್ಟಿನ ಸುತ್ತಲೂ ಇರುವ ಗದ್ದೆಗಳಿಗೆ ತೋಟಗಳಿಗೆ ನೀರು ನುಗ್ಗಿದೆ. ಕಾರ್ಕಳ ತಾಲೂಕಿನ ಕೆರುವಾಶೆ, , , ಎಣ್ಣೆಹೊಳೆ ಹೆರ್ಮುಂಡೆಯ ಸ್ವರ್ಣ ನದಿಯ ತಟದ ಪ್ರದೇಶಗಳಲ್ಲಿ ನೀರು ನುಗ್ಗಿದೆ.ಹೆಬ್ರಿ ಭಾಗದಲ್ಲಿ ಹರಿಯುವ ಸೀತಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ
ಶುಕ್ರವಾರ ಬೀಸಿದ ಗಾಳಿ ಗೆ ಎರ್ಲಪಾಡಿ ಗ್ರಾಮ ದ ವಸಂತಿ ಹಾಂಡ ಇವರ ಮನೆ ಯ ತಗಡ್ ಶೀಟ್ ಹಾರಿ ಹೋಗಿ ಅಂದಾಜು ರೂ 10000 ನಷ್ಟವಾಗಿದೆ,ಕೆರ್ವಾಶೆ ಗ್ರಾಮದ ಅಂಕೊತಿಮಾರ್ ವೆಂಕಟಪ್ಪ ಸರ್ವೆಗರ್ ಅವರ ಮನೆಯ ಹಂಚುಗಳು ದಂಬೆ , ಮರದ ರೀಪು ಸೇರಿದಂತೆ ಹಾರಿಹೋಗಿದ್ದು ರೂ 20000 ಹಾನಿಯಾಗಿದೆ.ಮಳೆ ಗಾಳಿ ಬೀಸಿದ ಕಾರಣ ಅಜೆಕಾರು ಕೆರುವಾಶೆ, ಕಬ್ಬಿನಾಲೆ ಪ್ರದೇಶದ ಗಳಲ್ಲಿ ವಿದ್ಯುತ್ ಪೂರೈಕೆ ಯಲ್ಲಿ ಅಡಚಣೆಯುಂಟಾಗಿತ್ತು , ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಹೆಬ್ರಿ ಮೇಲ್ಪೆಟೆಯಲ್ಲಿ ವಿಪರೀತ ಗಾಳಿ ಮಳೆಗೆ ಮರ ಉರುಳಿ ಸಂಚಾರದಲ್ಲಿ ವೃತ್ಯಯವಾದ ವಾಗಿದೆ,ಮಣಿಪಾಲ ಹಾಗೂ ಶಿವಮೊಗ್ಗ ಸಂಚರಿಸುವ ವಾಹನಗಳನ್ನು ಪೊಲೀಸ್ ಕ್ವಾಟ್ರಸ್ ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು.ಸುಮಾರು ಒಂದು ಘಂಟೆಗು ಹೆಚ್ಚು ಮರ ತೆರವು ಕಾರ್ಯಾಚರಣೆ ನಡೆಯಿತು . ಶುಕ್ರವಾರ ಗಾಳಿ ಮಳೆಗೆ ಕಾರ್ಕಳ ತಾಲೂಕಿನ ನಿಂಜೂರು ಶ್ರೀನಿವಾಸ ನಾಯಕ್ ಅವರ .ನೆಗೆ ಮರಬಿದ್ದು 40000 ಹಾನಿ ಸಂಭವಿಸಿದೆ, ಈದು ಗ್ರಾಮದ ಚಂದ್ರು ಪೂಜಾರ್ತಿ ಅವರ ಮನೆ ಮೇಲೆ ಮರಬಿದ್ದು 25000 ರೂ ಹಾನಿ ಯಾಗಿದೆ, ನಂದಳಿಕೆ ಗ್ರಾಮದ ದೇವಸ್ಥಾನ ಹತ್ತಿರದ ಸುಬ್ರಹ್ಮಣ್ಯ ಭಟ್ ಅವರ ಮನೆ ಭಾಗಶಃ ಹಾನಿಯಾಗಿ ರೂ 10000 ನಷ್ಟ ಸಂಭವಿಸಿ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.