logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ನಾರಾವಿ ಭಾಗದಲ್ಲಿ ಭಾರಿ ಮಳೆ,,,, ತುಂಬಿ ಹರಿದ ಸುವರ್ಣ ನದಿ . ಜಲಸ್ಪೋಟದ ಶಂಕೆ

ಟ್ರೆಂಡಿಂಗ್
share whatsappshare facebookshare telegram
3 Aug 2022
post image

ಕಾರ್ಕಳ: ಪಶ್ಚಿಮ ಘಟ್ಟ ಪ್ರದೇಶ ಕುದುರೆ ಮುಖ ಅಭಯಾರಣ್ಯ ವ್ಯಾಪ್ತಿಯ ನಾರಾವಿ ಭಾಗದಲ್ಲಿ ಸಂಜೆ 4 ಘಂಟೆ ವೇಳೆಗೆ ಭಾರಿ ಸ್ಪೋಟದ ಸದ್ದು ಕೇಳಿ ಬಂದಿದ್ದು ಸತತವಾಗಿ ಮಳೆ ಸುರಿದಿದೆ.ಇದರ ಜೊತೆ ಸುವರ್ಣ ನದಿಯಲ್ಲಿ ಭಾರಿ ಕೆಸರು ಮಿಶ್ರಿತ ನೀರು ಹರಿಯುತಿತ್ತು ಎನ್ನಲಾಗಿದೆ. . ಸ್ಥಳೀಯ ರು ಹೇಳುವಂತೆ ಜಲಸ್ಪೋಟ ವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭೂ ಕುಸಿತವಾಗಿರುವ ಶಂಕೆ ; ಕುದುರೆಮುಖ ಅಭಯಾರಣ್ಯ ವ್ಯಾಪ್ತಿ ಯಲ್ಲಿ ನದಿಯಲ್ಲಿ ಏಕಾಏಕಿ ಭಾರಿ ಕೆಸರು ನೀರಿನಿಂದ ನೀರಿನ ಹರಿವು ಉಂಟಾದ ಸಂದರ್ಭದಲ್ಲಿ ಭೂ ಕುಸಿತ ವಾಗಿರುವ ಸಂಶಯ ವ್ಯಕ್ತವಾಗಿದೆ .ಈ ಭಾಗದಲ್ಲಿ ಮಳೆ ನಿರಂತರ ಸುರಿಯುತಿದ್ದು ಮಾಹಿತಿ ಸಾಧ್ಯವಾಗಿಲ್ಲ.

ನೂರಾಲ್ಬೆಟ್ಟು ನಾರಾವಿ ಕುತ್ಲೂರು , ಈದು ಮೂರು ಗ್ರಾಮಗಳು 90% ಅರಣ್ಯ ಪ್ರದೇಶಗಳಿಂದ ಅವೃತವಾದ ಪ್ರದೇಶಗಳಾಗಿವೆ. ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಬಳಿ ಹರಿಯುತ್ತಿರುವ ಸುವರ್ಣ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು ದೇವಾಲಯ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು

ಮೊದಲ ಬಾರಿ ಜಲಾವೃತವಾದ ಸೇತುವೆ: ಕಾರ್ಕಳ ಬೆಳ್ತಂಗಡಿ ರಾಜ್ಯ ಹೆದ್ದಾರಿ ಯ ನಾರಾವಿಯ ಅರಸಿಕಟ್ಟೆ ಎಂಬಲ್ಲಿ ಸೇತುವೆ ಮೇಲ್ಭಗದಲ್ಲಿ ನೀರು ಹರಿದಿದ್ದು ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ತೊಂದರೆ ಉಂಟಾಗಿತ್ತು. ಸೇತುವೆ ಮೇಲ್ಬಾಗದಲ್ಲಿ ಎಕಾಏಕಿ ನೀರು ಹೆಚ್ಚಾಗ ತೊಡಗಿದಾಗ ಭಾರಿ ಟ್ರಾಫಿಕ್ ಜಾಂ ಉಂಟಾಗಿತ್ತು. ಬಿರ್ಮೊಟ್ಟು , ರಾಮೆರಗುತ್ತು ಸುತ್ತಮುತ್ತ , ನಾರಾವಿ ಯ ಕೆಳಗಿನ ಪೇಟೆ ಯ ಸುತ್ತಮುತ್ತಲಿನ ತೋಟಗಳಿಗೆ ನೀರು ನುಗ್ಗಿತ್ತು‌.

ಸ್ಥಳೀಯ ರು ಹೇಳಿರುವಂತೆ ಮೊದಲ ಬಾರಿಗೆ ಮಳೆಗೆ ಅಂಚಿಕಟ್ಟೆ ಸೇತುವೆ ಮುಳುಗಡೆಯಾಗಿದೆ . ಸೆತುವೆಯ ಮೇಲ್ಭಾಗದಲ್ಲಿ2 ಅಡಿ ನೀರು ನಿಂತಿದ್ದು ಒಂದು ಘಂಟೆ ಗಳ ಕಾಲ ಜಾಂ ಉಂಟಾಗಿತ್ತು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.