



ಚಿತ್ರದುರ್ಗ: ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಕೇದಾರನಾಥನ ದರ್ಶನಕ್ಕಾಗಿ ಉತ್ತರಾಖಂಡ್‌ಗೆ ತೆರಳಿದ್ದ ಚಿತ್ರದುರ್ಗ ಮೂಲದ ಮೂವರು ಮಹಿಳೆಯರು ಸೇರಿದಂತೆ 40 ಕನ್ನಡಿಗರು ಕೇದಾರ ಬಳಿ ಸಿಲುಕಿದ್ದಾರೆ.
ಕಳೆದ ಒಂದು ವಾರದ ಹಿಂದೆ ನಲವತ್ತು ಜನರ ತಂಡದ ಜೊತೆಗೆ ಚಿತ್ರದುರ್ಗದ ಮೂವರು ಮಹಿಳೆಯರು ಕೂಡ ಪ್ರವಾಸ ತೆರಳಿದ್ದರು. ಆದ್ರೆ ಕೇದಾರ ಬಳಿ ವಿಪರೀತ ಮಳೆ ಹಾಗೂ ಗುಡ್ಡ ಕುಸಿತ ಹಿನ್ನೆಲೆ ಕೇದಾರನಾಥದಿಂದ 30ಕಿ.ಮೀ ದೂರದಲ್ಲಿ ಅನೇಕರು ಸಿಲುಕಿದ್ದಾರೆ.
ಇನ್ನು ಸಿಲುಕಿಕೊಂಡವರಲ್ಲಿ ಚಿತ್ರದರ್ಗದ ಬಿಜೆಪಿ ಮುಖಂಡರಾದ ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇತರರಿದ್ದು ಕೇದಾರನಾಥ ತಲುಪಲು ಆಗುತ್ತಿಲ್ಲ, ವಾಪಸ್ ಬರಲಾಗದ ಸ್ಥಿತಿ ಇದ್ದು ಶೀಘ್ರ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲು ಮನವಿ ಮಾಡಿದ್ದಾರೆ.
ಕೇದಾರ ಬಳಿ ಒಟ್ಟು 40 ಜನ ಸಿಲುಕಿಕೊಂಡಿದ್ದಾರೆ. ಚಿತ್ರದುರ್ಗದ 3 ಮಹಿಳೆಯರು, ಶಿವಮೊಗ್ಗ 4, ಭದ್ರವತಿಯಿಂದ 7 ಜನ ಹಾಗೂ ಬೆಂಗಳೂರಿನ 26 ಮಂದಿ ಸಿಲುಕಿದ್ದಾರೆ. ಈ ಜಾಗವನ್ನು ರೆಡ್ ಜೋನ್ ಅಂತ ಘೋಷಣೆ ಮಾಡಲಾಗಿದೆ.
ಉತ್ತರ ಭಾರತದ ಹಲವೆಡೆ ಸಾಲು, ಸಾಲು ಭೂಕುಸಿತಗಳು ಸಂಭವಿಸುತ್ತಿವೆ. ಕಳೆದ ಒಂದು ತಿಂಗಳ ಹಿಂದಷ್ಟೇ ಭಾರೀ ಮಳೆಯಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯದ ಜನರು ಮಳೆಗೆ ಕಂಗಾಲಾಗಿದ್ದರು. ಆದ್ರೆ ಈಗ ಸಾಲು, ಸಾಲು ಭೂಕುಸಿತದ ದುರಂತ ಸ್ಥಳೀಯರು ಹಾಗೂ ಪವಿತ್ರ ಕ್ಷೇತ್ರಗಳಿಗೆ ಭೇಟಿ ಕೊಟ್ಟ ಪ್ರವಾಸಿಗರ ಜೀವಕ್ಕೆ ಆಪತ್ತು ತಂದಿವೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.