



ಕಾರ್ಕಳ: ಸಮಸ್ಯೆಗಳನ್ನು ಹಿಡಿದು ಬರುವ ಸಾರ್ವಜನಿಕರಿಗೆ, ಆಡಳಿತ ಸೌಧ ಸಮಾದಾನ ನೀಡುವ ಸೌಧ ವಾಗಬೇಕು .ಜನರಿಗೆ ನಿರಂತರ ಸೇವೆಗಳನ್ನು ಒದಗಿಸುವ ಸೇವಾ ಕೇಂದ್ರ ವಾಗಿ ಬೆಳೆಯಬೇಕು.ಎಂದು ಇಂಧನ ಹಾಗೂ ಕನ್ನಡ ಹಾಗೂ ಸಂಸ್ಕೃತಿ ಖಾತೆ ಸಚಿವ ವಿ ಸುನಿಲ್ ಕುಮಾರ್ ಹೇಳಿದರು .ಅವರು ಹೆಬ್ರಿ ತಾಲೂಕಿನ ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಭೇಟಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು.
ಜನರ ಸಮಸ್ಯೆ ಗಳಿಗೆ ಅಧಿಕಾರಿ ಮಟ್ಟದಲ್ಲಿ ನ್ಯಾಯ ಸಿಗಬೇಕು, ರಾಜ್ಯಮಟ್ಟದ ಯೋಜನೆಗಳ ಬಗ್ಗೆ ಸಾರ್ವಜನಿಕ ಭೇಟಿ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡುವ ಮೂಲಕ ಸರಕಾರದ ಯೋಜನೆಗಳ ಮಾಹಿತಿ ನೀಡಲು ಅನುಕೂಲ ವಾಗಲಿದೆ. ಸರಕಾರವು ಅನುಷ್ಠಾನ ಗೊಳಿಸಿದ ಯೋಜನೆಗಳ ಲಾಭ ಪಡೆಯಲು ಗ್ರಾಮ ಮಟ್ಟದಲ್ಲಿ ಗ್ರಾಮ ವನ್ ಸೇವೆಗಳನ್ನು ಆರಂಭಿಸಲಾಗಿದೆ.
ಬೊಮ್ಮಾಯಿ ನೇತೃತ್ವದ ಸರಕಾರವು ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡಿದೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕಾರ್ಕಳ ವಿಧಾನಸಭಾ ಕ್ಷೇತ್ರದ ಲ್ಲಿ 34000 ಜನರು ಫಲಾನುಭವಿಗಳಗಿದ್ದು , ರೈತ ವಿದ್ಯಾನಿಧಿ ಯೋಜನೆಯ ಮೂಲಕ ಕಾರ್ಕಳ ತಾಲೂಕಿನ ಲ್ಲಿ 3500 ವಿದ್ಯಾರ್ಥಿಗಳು ಸೇರಿದಂತೆ ಉಡುಪಿ ಜಿಲ್ಲೆಯ ಲ್ಲಿ18000 ವಿದ್ಯಾರ್ಥಿಗಳು ಪ್ರಯೋಜನ ಪಡೆಯುತಿದ್ದಾರೆ. ಮನೆಬಾಗಿಲಿಗೆ ಪಿಂಚಣಿ , ಮನೆಬಾಗಿಲಿಗೆ ಕಂದಾಯ ಸೇವೆ ಯೋಜನೆಗಳು, ವಿದ್ಯುತ್ ರಹಿತ ಮನೆಗಳಿಗೆ ಬೆಳಕು ಯೋಜನೆ ನಿಡುವ ಮೂಲಕ ಬಿಜೆಪಿ ಸರಕಾರ ಕಡಿಮೆ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಗೆ ಒತ್ತು ನೀಡಿದೆ ಎಂದರು.
ತಾ.ಪಂ ಕಟ್ಟಡ ನಿರ್ಮಾಣ ಮಾಡಲು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಗೊಂಡಿದ್ದು ಜುಲೈ ತಿಂಗಳಲ್ಲಿ ಶಿಲಾನ್ಯಾಸ ನೆರವೇರಲಿದೆ , ಸಕಲ ಸೌಲಭ್ಯಗಳನ್ನು ಒಳಗೊಂಡ ಬಸ್ ನಿಲ್ದಾಣ ಶೀಘ್ರ ನಿರ್ಮಾಣ ಗೊಳ್ಳಲಿದೆ. , ಹೆಬ್ರಿ ತಾಲೂಕಿನ ಕಾರ್ಮಿಕರ ಹಿತದೃಷ್ಟಿಯನ್ನು ಮನಗಂಡು ಕಾರ್ಮಿಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕ ಭವನ ನಿರ್ಮಾಣವಾಗಲಿದೆ ಅದಕ್ಕಾಗಿ ಎರಡು ಕೋಟಿ ಅನುದಾನ ತೆಗೆದಿರಿಸಲಾಗಿದೆ. ಕಾರ್ಕಳ ವಿಧಾನ ಸಭಾ ವ್ಯಾಪ್ತಿಯಲ್ಲಿ ಆಡಳಿತಕ್ಕೆ ಹೊಸ ಸ್ಪರ್ಶವನ್ನು ನೀಡಲಿದೆ ಎಂದರು
ಜುಲೈ ನಲ್ಲಿ ಹಕ್ಕು ಪತ್ರ ವಿತರಣೆ :
ರಾಜ್ಯದ ಲ್ಲಿ ಜನರು ಎದುರಿಸುತಿದ್ದ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥ ವಾಗಿದ್ದು 94.C , 94CC ಹಾಗು 53 ಅರ್ಜಿ ಗಳ ವಿಲೇವಾರಿ ಯಾಗಿದ್ದು ಜುಲೈ ತಿಂಗಳಿನಿಂದ ಹಕ್ಕು ಪತ್ರಗಳ ವಿತರಣೆಗೆ ಅಭಿಯಾನ ನಡೆಯಲಿದೆ. ಎಂದು ಸಚಿವರು ಇದೆ ತಿಳಿಸಿದರು
ಜಿಲ್ಲಾಧಿಕಾರಿ ಕೂರ್ಮ ರಾವ್ ಮಾತನಾಡಿ ಸಾರ್ವಜನಿಕ ಭೇಟಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮಗಳಿಂದ ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಥಳೀಯಾಡಳಿತದಿಂದ ಹಿಡಿದು ಜಿಲ್ಲಾ ಮಟ್ಟದ ವರೆಗಿನ ಎಲ್ಲಾ ಸಮಸ್ಯೆ ಗಳನ್ನು ಪರಿಹರಿಸಲು ಸಾಧ್ಯವಾಗಲಿದೆ. ಅಧಿಕಾರಿಗಳ ಸ್ಪಂದನೆ ಹಾಗು ಆಡಳಿತಕ್ಕೆ ಚುರುಕು ಮುಟ್ಟಿಸಲು ಸಹಕಾರಿಯಾಗಲಿದೆ . ಆಡಳಿತ ಸೌಧದವು ನಿರ್ಮಾಣಗೊಂಡ ಬಳಿಕ ಮೊದಲ ಸರಕಾರದ ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿರುವುದು ಸಂತಸವಾಗುತ್ತಿದೆ ಎಂದರು.
ತಹಶಿಲ್ದಾರ್ ಪುರಂದರ ಕೆ ಪ್ರಸ್ತಾವಿಕ ಅಹವಾಲು ಮಾತನಾಡಿ ಸರಕಾರದ ಯೋಜನೆಗಳನ್ನು ಸಕಾಲದಲ್ಲಿ ನೇರವಾಗಿ ಫಲಾನುಭವಿಗಳಿಗೆ ತಲುಪಲು ಸಚಿವರ ಸಾರ್ವಜನಿಕ ಭೇಟಿ ಕಾರ್ಯಕ್ರಮಗಳು ಸಹಕಾರಿ ಯಾಗಲಿವೆ. ಹೆಬ್ರಿ ತಾಲೂಕಿನಲ್ಲಿ ಪ್ರತಿ ತಿಂಗಳ ಒಂದು ದಿನ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಿರಂತರ ನಡೆಸಲು ಸಚಿವರಿಗೆ ತಹಸಿಲ್ದಾರ್ ಮನವಿಮಾಡಿದರು .
ಜಿಲ್ಲಾಧಿಕಾರಿ ಕೂರ್ಮಾರಾವ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಜಿಕೆ , . ಹೆಬ್ರಿ ಗ್ರಾ.ಪಂ ಅಧ್ಯಕ್ಷೆ ಮಾಲತಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತಿ ರಿದ್ದರು.
ಹೆಬ್ರಿ ತಾಲೂಕಿನ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.