



ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ತಾಲೂಕು ಘಟಕ ಚೈತನ್ಯ ಯುವ ವೃಂದ ಮತ್ತು ಚೈತನ್ಯ ಮಹಿಳಾ ವೃಂದದ ಸಹಯೋಗದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಗಾಂಧಿ ಸ್ಮೃತಿ ಕಾರ್ಯಕ್ರಮ ಸೋಮವಾರ ಚೈತನ್ಯ ಸಭಾಂಗಣದಲ್ಲಿ ನಡೆಯಿತು
ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರು ದಿನೇಶ ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಕ್ಕೆ ಸತ್ಯ ಶಾಂತಿಯ ಮಹತ್ವವನ್ನು ತಿಳಿಸಿದವರು ಮಹಾತ್ಮ ಗಾಂಧಿ. ಅವರ ಜನ್ಮದಿನದಂದು ಎಲೆಯ ಮರೆಯ ಪ್ರತಿಭೆಗಳನ್ನು ಗುರುತಿಸುವುದು.ಅವರನ್ನು ಪ್ರೋತ್ಸಾಹಿಸುತ್ತಾ ಗಾಂಧಿ ತತ್ವ ಚಿಂತನೆಗಳನ್ನು ಕವನಗಳ ಮೂಲಕ ಹರಡುವ ಸಾಹಿತ್ಯ ಪರಿಷತ್ತಿನ ಕಾರ್ಯ ಅಭಿನಂದನೀಯ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಹೆಬ್ರಿ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮಾತನಾಡಿ ಗಾಂಧೀಜಿಯವರ ಯಶೊಗಾಥೆಯನ್ನು ಕೊಂಡಾಡಿದರು
ಮುಖ್ಯ ಅತಿಥಿಯಾಗಿ ಚೈತನ್ಯ ಯುವ ವೃಂದದ ಗೌರವ ಅಧ್ಯಕ್ಷ ಜನಾರ್ಧನ್ ಹೆಚ್ , ಚೈತನ್ಯ ಮಹಿಳಾ ವೃಂದದ ಅಧ್ಯಕ್ಷೆ ವಿದ್ಯಾ ಜನಾರ್ಧನ್ , ಚೈತನ್ಯ ಮಹಿಳಾ ವೃಂದದ ಕಾರ್ಯದರ್ಶಿ ಸುಮನಾ ಜಿ. ನಾಯಕ್ , ಕ. ಸಾ.ಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್ ಅವರು ಗಾಂಧಿ ಕುರಿತು ಚಿಂತನ ಪ್ರಸ್ತುತ ಪಡಿಸಿದರು. ಕ. ಸಾ.ಪ ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಗಾಂಧಿ ಸ್ಮೃತಿ ಕವನಗೋಷ್ಠಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕ.ಸಾ.ಪ ಪದಾಧಿಕಾರಿಗಳಾದ ಸುರೇಶ ಭಂಡಾರಿ, ಸ್ವಾಗತಿಸಿ,ಸಂತೋಷ ಮುದ್ರಾಡಿ ಅವರು ಕಾರ್ಯಕ್ರಮ ನಿರೂಪಿಸಿ, ಮಹೇಶ ಹೈಕಾಡಿ ಧನ್ಯವಾದವಿತ್ತರು.ಪುಷ್ಪಾವತಿ ಹೆಬ್ರಿ ಪ್ರಾರ್ಥಿಸಿದರು.
ಹೆಬ್ರಿ ತಾಲೂಕು ಮಟ್ಟದ ಗಾಂಧಿ ಕುರಿತ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅರುಣಾ ಹೆಬ್ರಿ (ಪ್ರಥಮ) ದಿನೇಶ ಶೆಟ್ಟಿಗಾರ ( ದ್ವಿತೀಯ) ಚೈತ್ರಾ ಕಬ್ಬಿನಾಲೆ ( ತೃತೀಯ ) ಇವರಿಗೆ ಪ್ರಶಸ್ತಿ ಫಲಕ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಕವಿಗೋಷ್ಠಿಯಲ್ಲಿ ಪೂರ್ಣೇಶ್ ಹೆಬ್ರಿ, ಪ್ರೇಮಾ ಬಸನಗೌಡ ಬಿರಾದರ, ನಮಿತಾ ಪೂಜಾರಿ, ವಿಜಯಲಕ್ಷ್ಮಿ ಆರ್ ಕಾಮತ್ ಮುನಿಯಾಲು, ಧೀರಜ್ ಕನ್ಯಾನ, ಮಂಜುಳಾ ಗಂಜಿ, ಭವ್ಯಾಕರುಣಾಕರ್ ಸೋಮೇಶ್ವರ ,ಅಭಿಷೇಕ್ ಸೋಮೇಶ್ವರ, ಪ್ರಿಯಾಂಕ ಸೀತಾನದಿ,ಸವಿತಾ ರತ್ನಾಕರ ಪೂಜಾರಿ ಮಾತಿಬೆಟ್ಟು, ಡಾ.ಪ್ರವೀಣ ಕುಮಾರ್ , ಮಂಜುನಾಥ ಕೆ ಶಿವಪುರ, ಪುಷ್ಪಾವತಿ ಶೆಟ್ಟಿ ಹೆಬ್ರಿ, ಮಹೇಶ ಹೈಕಾಡಿ, ಪ್ರೀತೇಶ ಕುಮಾರ್ ಗಾಂಧಿ ಕುರಿತ ಸ್ವರಚಿತ ಕವನಗಳನ್ನು ವಾಚಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.