logo
WhatsApp Image 2026-04-02 at 14.46.04.jpeg
hindalco everlast.jpeg

ಹೆಬ್ರಿ :ಕೆರೆಬೆಟ್ಟು ವಿದ್ಯಾರ್ಥಿ ನೇಣು ಆತ್ಮಹತ್ಯೆ.

ಟ್ರೆಂಡಿಂಗ್
share whatsappshare facebookshare telegram
16 Jan 2022
post image

ಹೆಬ್ರಿ : ಶಿವಪುರ ಕೆರೆಬೆಟ್ಟು ಎಂಬಲ್ಲಿನ ಯುವಕ ಖಾಸಗಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ರವಿವಾರ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೆಬ್ರಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೆ ತರಗತಿಯ ಅನ್ವಿತ್ ಶೆಟ್ಟಿ( 14) ರವಿವಾರ ಬೆಳಿಗ್ಗೆ ತನ್ನ ಮನೆಯ ಬಾತ್ ರೂಮಿನಲ್ಲಿರುವ ಕಬ್ಬಿಣದ ರಾಡ್ ಗೆ ಚೂಡಿದಾರದ ವೇಲ್ ಅನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.ಬಾತ್ ರೂಮಿಗೆ ಹೋಗಿ ಕೆಲ ಸಮಯ ಆದರೂ ಅಣ್ಣ ಬರಲಿಲ್ಲ ಅಂತ ತಮ್ಮ ಬಾಗಿಲು ಬಡಿದರೂ ಬಾಗಿಲು ತೆಗೆಯದಿದ್ದಾಗ ಐದನೇ ತರಗತಿ ಓದುತ್ತಿರುವ ಸಹೋದರ ಬಾತ್ ರೂಮಿನ ಕಿಂಡಿಯಲ್ಲಿ ಇಣುಕಿ ನೋಡಿದಾಗ ಅಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು. ಕೂಡಲೇ ಪೋಷಕರು ಹೆಬ್ರಿಯ ಖಾಸಗಿ ಆಸ್ಪತ್ರೆಗೆ ಕರೆತಂದರು ವೈದ್ಯರು ಪರೀಕ್ಷೆ ನಡೆಸಿ ಮೃತಪಟ್ಟಿರುವುದು ದೃಡಪಡಿಸಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.