logo
WhatsApp Image 2026-04-02 at 14.46.04.jpeg
hindalco everlast.jpeg

ಹೆಬ್ರಿ: ಎತ್ತಿ ಆಡಿಸುವ ವೇಳೆ ಕೆಳಗೆ ಬಿದ್ದು ಮಗು ಗಂಭೀರ

ಟ್ರೆಂಡಿಂಗ್
share whatsappshare facebookshare telegram
20 May 2022
post image

ಹೆಬ್ರಿ: ಮಗುವನ್ನು ಎತ್ತಿ ಆಡಿಸುವ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಪುರ ಗ್ರಾಮದ ಮುಳ್ಳು ಗುಡ್ಡೆಯಲ್ಲಿ ನಡೆದಿದೆ. ಜನತಾ ಕಾಲೋನಿಯ ಕೃಷ್ಣ ಶಕುಂತಲ ದಂಪತಿಯ ಎರಡೂವರೆ ವರ್ಷದ ಸಾಕ್ಷಿ ಗಂಭೀರ ಗಾಯಗೊಂಡ ಮಗು. ಮಂಗಳವಾರ ರಾತ್ರಿ ಮನೆಯ ಸಮೀಪದಲ್ಲಿರುವ ಗುಡ್ಡದ ದೈವದ ತಂಬಿಲ ಇದ್ದ ಕಾರಣ ಮನೆಯಲ್ಲಿ ಊಟಕ್ಕೆ ಸಂಬಂಧಿಕ ರಾಜು ಎಂಬವರ ಬಂದಿದ್ದು ಈ ವೇಳೆ ಮನೆಯ ಚಾವಡಿಯಲ್ಲಿ ಸಾಕ್ಷಿ ಆಟವಾಡುತ್ತಿರುವಾಗ ಮಗುವನ್ನು ಎರಡು ಕೈಯಿಂದ ಎತ್ತಿ ಆಡಿಸಿದ್ದಾರೆ. ಈ ವೇಳೆ ರಾಜು ಕೈಯಿಂದ ಮಗು ಕೈಯಿಂದ ನೆಲಕ್ಕೆ ಜಾರಿ ಬಿದ್ದ ಪರಿಣಾಮವಾಗಿ ಮಗುವಿನ ಎಡ ಕಿವಿಯ ಬಳಿ ತೀವ್ರಸ್ವರೂಪದ ಗಾಯಗಳಾಗಿವೆ. ರಾಜು ನಿರ್ಲಕ್ಷದಲ್ಲಿ ಘಟನೆ ನಡೆದಿದೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.