



ಕಾರ್ಕಳ:ಪೋಲೀಸರು ರಾತ್ರಿ ವೇಳೆ ರೌಂಡ್ಸ್ ನಲ್ಲಿದ್ದ ಸಮಯದಲ್ಲಿ ಬೊಲೆರೊ ವಾಹನದಲ್ಲಿ ಹಿಂಸಾತ್ಮಕವಾಗಿ ದನಗಳನ್ನು ಸಾಗಿಸುತಿದ್ದ ಸಂದರ್ಭದಲ್ಲಿ ಬೊಲೆರೊ ವಾಹನ ಮರಕ್ಕೆ ಢಿಕ್ಕಿ ಹೊಡೆದು ದನಗಳ್ಳರು ತಪ್ಪಿಸಿಕೊಂಡು ಕಾಡಿನೊಳಗೆ ಓಡಿ ಹೋದ ಘಟನೆ ಹೆಬ್ರಿ ತಾಲೂಕಿನ ಬಚ್ಚಪ್ಪು ಜಂಕ್ಷನ್ ಬಳಿ ಜ12 ರ ಮುಂಜಾನೆ ಸಂಭವಿಸಿದೆ.
ಹೆಬ್ರಿ ಠಾಣಾಧಿಕಾರಿ ಸುದರ್ಶನ್ ದೊಡ್ಡಮನಿ ನೇತೃತ್ವದ ಪೊಲೀಸರ ತಂಡವು ಜ.12 ರ ಮುಂಜಾನೆ ಹೆಬ್ರಿ, ಶಿವಪುರ ಮುನಿಯಾಲು, ವರಂಗ ಕಡೆಗಳಲ್ಲಿ ರೌಂಡ್ಸ್ ನಲ್ಲಿ ದ್ದ ಸಮಯದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ನಾಡ್ಪಾಲು ಕಡೆಯಿಂದ ಅತಿ ವೇಗವಾಗಿ ಬರುತ್ತಿದ್ದ ಬೊಲೇರೋ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅದರ ಚಾಲಕ ವಾಹನವನ್ನು ನಿಲ್ಲಿಸದೆ ಮುದ್ರಾಡಿ ಕಡೆಯ ರಸ್ತೆಗೆ ತಿರುಗಿಸಿ ಅತಿವೇಗವಾಗಿ ಚಲಾಯಿಸಿಕೊಂಡು ಹೋಗಿ ವಾಹನವನ್ನು ಪೊಲೀಸರು ಬೆನ್ನಟ್ಟಿ ಹೋಗಿದ್ದು, ಕಳ್ಳರು ಪೊಲೀಸರಿಂದ ತಪ್ಪಿಸಲು ವಾಹನ ಚಲಾಯಿಸಿದ ಪರಿಣಾಮ ಬಚ್ಚಪ್ಪು ಜಂಕ್ಷನ್ ಬಳಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದು 3 ಜನ ದನಗಳ್ಳರು ಇಳಿದು ಕಾಡಿನ ಕಡೆಗೆ ಓಡಿ ಹೋಗಿ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ.
ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿ ಹಿಂಸಾತ್ಮಕವಾಗಿ ಖಾಸಾಯಿ ಖಾನೆಗೆ ಸಾಗಿಸುತ್ತಿದ್ದರು ಎಂದು ಆರೋಪಿಗಳ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.