



ಹೆಬ್ರಿ : ಹೆಬ್ರಿಯ ಇಕ್ಕೋಡ್ಲು ಫಾರ್ಮ್‌ನಲ್ಲಿ ಶುಕ್ರವಾರ ಗೋದ್ರೇಜ್ ಸಲೂನ್ ಕಂಪೆನಿ ಸಹಯೋಗದಲ್ಲಿ ವೃತ್ತಿ ಎನ್‌ಜಿಓ ಸಂಸ್ಥೆಯ ವತಿಯಿಂದ ಮಹಿಳಾ ನವೋದ್ಯಮಿಗಳಿಗೆ ನಡೆದ ಬ್ಯೂಟಿಷನ್ ತರಭೇತಿ ಪಡೆದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ೮೫ ಮಂದಿಗೆ ಪ್ರಮಾಣಪತ್ರ ನೀಡಲಾಯಿತು.
ವೃತ್ತಿ ಎನ್‌ಜಿಓ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ತಹಸೀನ ಮಾತನಾಡಿ ಮಹಿಳೆಯರು ನವೋದ್ಯಮಿಗಳಾಗಿ ಸಾಧನೆ ಮಾಡಿ ಸಬಲರಾಗಬೇಕು ಎಂಬ ಉದ್ದೇಶದಿಂದ ಗೋದ್ರೇಜ್ ಸಲೂನ್ ಕಂಪೆನಿ ಸಹಯೋಗದಲ್ಲಿ ವೃತ್ತಿ ಎನ್‌ಜಿಓ ಸಂಸ್ಥೆ ಮಹಿಳೆಯರಿಗೆ ಸ್ವಉದ್ಯೋಗದ ಮೂಲಕ ಸ್ವಂತ ಉದ್ಯಮ ನಡೆಸಲು ತರಭೇತಿಯ ಜೊತೆಗೆ ಪ್ರೇರಣೆ ನೀಡುತ್ತಿದೆ ಎಂದರು. ವೃತ್ತಿ ಎನ್‌ಜಿಓ ಸಂಸ್ಥೆಯ ಪ್ರಾಜೆಕ್ಟ್ ಮುಖ್ಯಸ್ಥ ಜೈಗಣೇಶ್ ಪ್ರಮಾಣ ಪತ್ರ ನೀಡಿ ಜೀವನದಲ್ಲಿ ಯಶಸ್ವಿ ಉದ್ಯಮಿಗಳಾಗಲು ಪಡೆದ ತರಭೇತಿಯನ್ನು ಉಪಯೋಗಿಸಿಕೊಂಡು ಮುನ್ನಡೆಯಿರಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕಿಯಾದ ವೃತ್ತಿ ಎನ್‌ಜಿಓ ಸಂಸ್ಥೆಯ ಪ್ರಾಜೆಕ್ಟ್ ಆಫೀಸರ್ ಹೆಬ್ರಿಯ ಸುನೀತಾ ಅರುಣ್ ಹೆಗ್ಡೆ ಬ್ಯೂಟಿಷನ್ ತರಭೇತಿ ಪಡೆದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ೮೫ ಮಂದಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಿದರು. ಸ್ಟಾರ್ ಬ್ಯೂಟಿ ಪ್ರಶಸ್ತಿ ಪಡೆದ ಬೆಳ್ತಂಗಡಿ ಮಡಂತ್ಯಾರಿನ ಜನಿತ ಪುಟಾರ್ಡೋ ಮತ್ತು ಮೂಡಬಿದರೆ ಕೊಡ್ಯಡ್ಕದ ಭಾರತಿ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ರೋಹಿಣಿ ಮಂಗಳೂರು ಅನಿಸಿಕೆ ಹಂಚಿಕೊಂಡರು. ಸುನೀತಾ ಭಕ್ತವತ್ಸಲ ಸ್ವಾಗತಿಸಿ ವೀಣಾ ಹೊಸ್ಮಾರ್ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.