



ಕಾರ್ಕಳ: ಹೆಬ್ರಿ ತಾಲೂಕಿನ ಚಾರ ಗ್ರಾ. ಪಂ ಕಟ್ಟಡದಲ್ಲಿ ಸೋಮವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿ ಪೀಠೋಪಕಾರಣಗಳು ಕಂಪ್ಯೂಟರ್ ಗಳು ಕಂದಾಯ ದಾಖಲೆಗಳು ಸೇರಿದಂತೆ ಎಲ್ಲವು ಸಂಪೂರ್ಣ ಅಗ್ನಿ ಅಹುತಿಯಾಗಿದೆ . ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ದುರಂತ ಕ್ಕೆ ಕಾರಣವೆಂದು ಹೇಳಲಾಗಿದೆ ಸೋಮವಾರ ರಾತ್ರಿ 1 ಘಂಟೆ ಸಮಯದಲ್ಲಿ ಪಂಚಾಯತ್ ಕಟ್ಟಡದಿಂದ ಹೊಗೆ ಕಾಣಿಸಿಕೊಂಡಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ ಎನ್ನಲಾಗಿದೆ.
ಸುಟ್ಟು ಹೋದ ದಾಖಲೆ ಗಳಿಗೆ ಹೊಣೆಯಾರು? ಕಂದಾಯ ದಾಖಲೆಗಳು ಸುಟ್ಟು ಹೋಗಿದ್ದ ಕಾರಣ ಸ್ಥಳೀಯರು ಚಿಂತಾಕ್ರಾಂತರಾಗಿದ್ದಾರೆ . ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.