



ಹೆಬ್ರಿ : ಜೆಸಿಐ ಹೆಬ್ರಿ ಮಹಿಳಾ ಜೇಸಿ ಮತ್ತು ಯುವ ಜೇಸಿ ವಿಭಾಗ ಸಹಯೋಗದೊಂದಿಗೆ ನಡೆಯುವ ಜೇಸಿ ಸಪ್ತಾಹ-2022 ಇದರ ಉದ್ಘಾಟನಾ ಸಮಾರಂಭ ವು ಸೆ.18 ರಂದು ಶ್ರೀ ಅನಂತ ಪದ್ಮನಾಭ ಸನ್ನಿದಿ ಸಭಾಭವನ ಹೆಬ್ರಿಯಲ್ಲಿ ನಡೆಯಿತು, ಉದ್ಘಾಟಕರಾಗಿ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಎ ಜಿ ಮ್ ಶ್ರೀ ಅನಂತ ನಾಯ್ಕ್ ಉದ್ಘಾಟನೆ ನೆರವೇರಿಸಿ ಮಾತನಾಡಿ ಜೇಸಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ಜೇಸಿಐ ನ ಅಧ್ಯಕ್ಷರಾದ ಜೇಸಿ ರೂಪೇಶ್ ನಾಯ್ಕ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ವಲಯ ಉಪಾಧ್ಯಕ್ಷರಾದ HGF ಹರೀಶ್ ಶೇಟ್, ಉದ್ಯಮಿ ನರೇಂದ್ರ ನಾಯಕ್, ಹೆಬ್ರಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಘುರಾಮ್ ಶೆಟ್ಟಿ, ಪೂರ್ವಾಧ್ಯಕ್ಷರಾದ ಜೇಸಿ ಯೋಗೀಶ್ ಭಟ್, ಹೆಬ್ರಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾದ ಜೇಸಿ ಪ್ರಕಾಶ್ ಶೆಟ್ಟಿ, ಕ. ಸಾ. ಪ ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಭಂಡಾರಿ, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಮಂಜುನಾಥ್ ಕೆ ಶಿವಪುರ, ಕಾರ್ಯದರ್ಶಿ ಜೇಸಿ ಅನಂತಪದ್ಮನಾಭ ನಾಯಕ್, ಮಹಿಳಾ ಜೇಸಿ ಸಂಯೋಜಕಿ ಜೇಸಿ ಅಕ್ಷತಾ ರೂಪೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸಭಾ ಕಾರ್ಯಕ್ರಮದ ಬಳಿಕ ಜೇಸಿಐ ಹೆಬ್ರಿ ಜೇಸಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಉಡುಪಿ ಜಿಲ್ಲಾ ಮಟ್ಟದ ಆಯ್ದ ಗಾಯಕರ ಕರೋಕೆ ಸಂಗೀತ ಗಾಯನ ಸ್ಪರ್ಧೆ ನಡೆಯಿತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.