



ಕಾರ್ಕಳ : ನೂತನ ಹೆಬ್ರಿ ಜೆಸಿ ಐ ಘಟಕಾಧ್ಯಕ್ಷರಾಗಿ ಆಯ್ಕೆ ಯಾದ ರೂಪೇಶ್ ನಾಯ್ಕ್ ರವರ ಪದಗ್ರಹಣ ಸಮಾರಂಭ ವು ಹೆಬ್ರಿ ಅನಂತಪದ್ಮನಾಭ ಸನ್ನಿಧಿ ಸಭಾಂಗಣದಲ್ಲಿ ಫೆ. ೯ ರಂದು ನಡೆಯಿತು.
ಪ್ರತಿಜ್ಞ ವಿಧಿ ಸ್ವೀಕರಿಸಿದ ಆಧ್ಯಕ್ಷ ರೂಪೇಶ್ ನಾಯ್ಕ್ ಮಾತನಾಡಿ ಹೆಬ್ರಿಯ ಯ ಅಸ್ಮಿತೆಯನ್ನು
ವಲಯಾಧ್ಯಕ್ಷರ ಆಶಯಕ್ಕೆ ಸಾಕಾರ ಗೊಳಿಸುವ ನಿಟ್ಟಿನಲ್ಲಿ ಮುಂದುವರೆಸಿ
ಆಡಂಬರಕ್ಕೆ ಕಾರ್ಯಕ್ರಮಕ್ಕೆ ಒತ್ತುಕೊಡದೆ , ಜನರಿಗೆ ತಲುಪುವ ಕಾರ್ಯಕ್ರಮ ಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು ಎಂದು ಹೇಳಿದರು
ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ ಎಂ ಮಾತನಾಡಿ ಜೆಸಿ ಕುಟುಂಬದ ಹೊಸ ನಾಯಕರನ್ನು ಹುಟ್ಟು ಹಾಕುತ್ತಿದ್ದು ವ್ಯಕ್ತಿತ್ವ ವಿಕಾಸಕ್ಕೆ ಹುರುಪು ತುಂಬಲು ಸಹಕಾರಿ ಎಂದರು .ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ ಮಾತನಾಡಿ ಮಕ್ಕಳ ಮನೊವಿಕಾಸಕ್ಕೆ ಹಾಗು ನಾಯಕತ್ವ ಜೆಸಿ ಉತ್ತಮ ವೇದಿಕೆಯಾಗಿದೆ ಎಂದರುಉಮೇಶ್ ಎಸ್ ಚೇರ್ಕಾಡಿ ಮಾತನಾಡಿ ಜೆಸಿ ಐ ಜೀವನಕ್ಕೆ ಬೆಳಕಾಗಿದ್ದು ಜೀವನ ಕಟ್ಟಿಕೊಟ್ಟ ಸಂಸ್ಥೆಯಾಗಿದೆ ಎಂದರು
.ಜೆಸಿ ವಲಯ ೧೫ ರ ಅಧ್ಯಕ್ಷ ಜೆಸಿ ರಾಯನ್ ಉದಯ್ ಕ್ರಾಸ್ಟಾ ಮಾತನಾಡಿ , ೩೭ ವರ್ಷಗಳ ಪೂರ್ವಾಧ್ಯಕ್ಷರು ಆಗಮಿಸಿ ಎಲ್ಲರಜೊತೆ ಸೇರಿಕೊಂಡು ಜೆಸಿಐ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ಬಹುದೊಡ್ಡ ಸಾಧನೆ ,ಹೊಸ ಯುವಕರು ಹಲವು ಯೋಚನೆಗಳನ್ನು ಹುಟ್ಟು ಹಾಕುತ್ತ ಉನ್ನತ ನಾಯಕತ್ವದ ಮೂಲಕ ಹೊಸ ಭಾಷ್ಯ ಬರೆಯೋಣ ವೆಂದರು

ಮುಖ್ಯ ಅತಿಥಿ ಗಳಾಗಿ ಉಡುಪಿ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಜೆಸಿ ಉಮೇಶ್ ಎ. ನಾಯ್ಕ್ ಮಾತನಾಡಿದರು ಜೆಸಿ ಹರೀಶ್ ಶೇಟ್ ನೂತನ ಜೆಸಿ ಸಂಘಟನೆಗೆ ಶುಭಹಾರೈಸಿದರು, ಕಾರ್ಯದರ್ಶಿ ಅನಂತಪದ್ಮನಾಭ ನಾಯಕ್ ಮಹಿಳಾ ಜೆಸಿ ಕೊ ಆರ್ಡಿನೇಟರ್ ಅಕ್ಷತಾ ರೂಪೇಶ್ ಜೂನಿಯರ್ ಜೆಸಿ ಅಧ್ಯಕ್ಷೆ ಅವನಿ ಹೆಗ್ಡೆ ನೂತನ ಸದಸ್ಯ ರಾಗಿ ಜೆಸಿ ಸತೀಶ್ ಬೆಳಂಜೆ, ಜೆಸಿ ಆಕಾಶ್ ಜೆಸಿ ಬಾಲ್ ರಾಜ್,ಜೆಸಿ ರಕ್ಷಿತಾ ,ಜೆಸಿ ಶ್ರೀಕಾಂತ್ ಆಚಾರ್ಯ, ಇತರ ಸದಸ್ಯರಿಗೆ ಅಧ್ಯಕ್ಷ ರೂಪೇಶ್ ಪ್ರತಿಜ್ಞೆ ವಿಧಿ ಭೋದಿಸಿದರು. ಜೆಸಿ ಪ್ರಕಾಶ್ ಶೆಟ್ಟಿ , ಬಾಲರಾಜ್ ಪರಿಚಯಿಸಿದರು.ಅನಂತಪದ್ಮನಾಭ ನಾಯಕ್ ವಂದನಾರ್ಪಣೆ ಗೈದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.