



ಕಾರ್ಕಳ : ಹೆಬ್ರಿ ತಾಲೂಕಿನ ಇತಿಹಾಸ ಪ್ರಸಿದ್ಧ ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಗರಡಿಯ ಸಾಂಪ್ರದಾಯಿಕ ಕುಚ್ಚೂರು ಮಾತ್‌ಕಲ್ ಕಂಬಳವು ಡಿ.೦೮ರಂದು ನಡೆಯಿತು. ಕಂಬಳ ಸ್ಪರ್ಧೆಯ ಅತೀ ಕಿರಿಯ ವಿಭಾಗದಲ್ಲಿ ಮಂದಾರ್ತಿ ಶೀರೂರು ಮುದ್ದುಮನೆ ಗೋಪಾಲನಾಯ್ಕ ಕೋಣಗಳು ಪ್ರಥಮ, ಪಾಂಡುನಾಯ್ಕ ಸೂರಾಲು ಗುಂಡಿಬೈಲು ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಗ್ಗ ಕಿರಿಯ ವಿಭಾಗದಲ್ಲಿ ಕುಚ್ಚೂರು ಕಾನ್ಬೆಟ್ಟು ಹರ್ಷಭಟ್ ಅವರ ಕೋಣಗಳು ಪ್ರಥಮ, ಬೈಂದೂರು ಕಂಟಿಕಾನು ಸಮೃದ್ಧಿ ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕೋಣಗಳು ದ್ವಿತೀಯ, ಹಗ್ಗ ಹಿರಿಯ ವಿಭಾಗದಲ್ಲಿ ವರುಣ್ ವರಶ್ರೀ ಹಾಲಾಡಿ ಪ್ರಥಮ, ಬೈಂದೂರು ಕಂಟಿಕಾನು ನಾರಾಯಣ ದೇವಾಡಿಗ ಅವರ ಕೋಣಗಳು ದ್ವಿತೀಯ, ಹಲಗೆ ಮುಕ್ತ ವಿಭಾಗದಲ್ಲಿ ಬಾರ್ಕೂರು ಆತ್ಮಜ್ ನೀರಜ್ ಕೋಣಗಳು ಪ್ರಥಮ, ಕಿರಿಮಂಜೇಶ್ವರ ಮೊಳೆಬೈಲು ಸುಕ್ರ ಅವರ ಕೋಣಗಳು ದ್ವಿತೀಯ ಸ್ಥಾನ ಪಡೆದಿವೆ. ಕಂಬಳ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ರಾವ್, ಆಧ್ಯಕ್ಷ ನಿತ್ಯಾನಂದ ಭಟ್, ಗರಡಿಯ ಅಧ್ಯಕ್ಷ ಕಿರಣ್ ತೋಳಾರ್, ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಜಾರ್‌ಮಕ್ಕಿ, ಕಾರ್ಯದರ್ಶಿ ರಮೇಶ್ ಪೂಜಾರಿ, ಪಂಚಾಯಿತಿ ಅಧ್ಯಕ್ಷೆ ರೇವತಿ ಎಸ್ ಶೆಟ್ಟಿ, ಹೆಬ್ರಿ ಸೊಸೈಟಿ ಅಧ್ಯಕ್ಷ ನವೀನ್ ಅಡ್ಯಂತಾಯ, ಹೆಬ್ರಿ ಠಾಣಾಧಿಕಾರಿ ಮಹೇಶ್, ಭೂತಗುಂಡಿ ಕರುಣಾಕರ ಶೆಟ್ಟಿ, ಬಾರಕೂರು ಆತ್ಮಜ್ ನೀರಜ್, ತೀರ್ಪುಗಾರರಾದ ಶಿಕ್ಷಕ ಪ್ರಶಾಂತ್ ಶೆಟ್ಟಿ , ವೆಂಕಟ ಪೂಜಾರಿ, ರವೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ನಿತ್ಯಾನಂದ ಶೆಟ್ಟಿ, ಮಂಜುನಾಥ ಶೆಟ್ಟಿ ಹಾಜರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.