



ಕಾರ್ಕಳ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ರಾಷ್ಟ್ರನಾಯಕರ ಅಥವಾ ರಾಷ್ಟ್ರಧ್ವಜದ ರಂಗೋಲಿ ಸ್ಪರ್ಧೆಯನ್ನು ಅಗಸ್ಟ್14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಹೆಬ್ರಿಯ ಆಡಳಿತ ಸೌಧ ದಲ್ಲಿ ನಡೆಸಲಾಗುತ್ತಿದೆ. ಇದಕ್ಕಾಗಿ ಭಾಗವಹಿಸಲು ಇಚ್ಚಿಸುವ ಹೆಬ್ರಿ ತಾಲೂಕಿನ ಸಾರ್ವಜನಿಕರು ಅಗಸ್ಟ್ 10 ರ ಸಂಜೆ 05.00 ಗಂಟೆ ಒಳಗೆ, ಕಮಲ್ ಅಹ್ಮದ್ ಎಮ್ ಅವರಲ್ಲಿ ನೊಂದಾಯಿಸಬೇಕು . ಜೊತೆಗೆ ಸ್ಪರ್ಧೆಗೆ ಬೇಕಾಗುವ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು. ಸ್ಪರ್ಧೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9980383752 ಸಂಪರ್ಕಿಸ ಬಹುದಾಗಿದೆ ಎಂದು ಹೆಬ್ರಿಯ ತಾಲೂಕು ತಹಶಿಲ್ದಾರ್ ಪುರಂದರ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.